ಕಲ್ಯಾಣದ ಕಲಾ ಪರಂಪರೆ ಅತ್ಯಂತ ಶ್ರೀಮಂತ

ಕಲಬುರಗಿ ಅಂಕುರ ಆರ್ಟ್​ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಶಿಲ್ಪಕಲಾ ಪ್ರದರ್ಶನವನ್ನು ಅತಿಥಿಗಳು ವೀಕ್ಷಿಸಿದರು. ಡಾ.ಶಿವಾನಂದ ಬಂಟನೂರ, ಉತ್ತರದೇವಿ, ಎಂ.ಎಚ್​.ಬೆಳಮಗಿ, ಹಣಮಂತ ಬಾಡದ, ಬಿ.ಎನ್​.ಪಾಟೀಲ್​ ಇತರರಿದ್ದರು.
ಕಲಬುರಗಿ ಅಂಕುರ ಆರ್ಟ್​ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಶಿಲ್ಪಕಲಾ ಪ್ರದರ್ಶನವನ್ನು ಅತಿಥಿಗಳು ವೀಕ್ಷಿಸಿದರು. ಡಾ.ಶಿವಾನಂದ ಬಂಟನೂರ, ಉತ್ತರದೇವಿ, ಎಂ.ಎಚ್​.ಬೆಳಮಗಿ, ಹಣಮಂತ ಬಾಡದ, ಬಿ.ಎನ್​.ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಯುಕೆ ಪ್ರಾಧ್ಯಾಪಕ ಡಾ.ಬಂಟನೂರ ಹೆಮ್ಮೆ
  • ಅಂಕುರ ಆರ್ಟ್​ ಗ್ಯಾಲರಿಯಲ್ಲಿ ಶಿಲ್ಪಕಲಾ ಪ್ರದರ್ಶನ
ಕಲಬುರಗಿ: ಕಲ್ಯಾಣ ನಾಡಿನ ಕಲಾ ಪರಂಪರೆ ಅತ್ಯಂತ ಶ್ರೀಮಂತವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ ಹೇಳಿದರು.
ನಗರದ ದಿ ಆರ್ಟ್​ ಇಂಟಿಗ್ರೇಶನ್​ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಡಿ ಭಾನುವಾರ ಏರ್ಪಡಿಸಿದ್ದ ಯಾದಗಿರಿಯ ಶಿಲ್ಪಕಲಾವಿದ ಹಣಮಂತ ಬಾಡದ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ ಉದ್ಘಾಟಿಸಿದ ಅವರು, ಶತಮಾನಗಳ ಹಿಂದಿನಿಂದಲೂ ಈ ಪ್ರದೇಶದಲ್ಲಿ ಚಿತ್ರ, ಶಿಲ್ಪಕಲಾವಿದರ ದೊಡ್ಡ ಪರಂಪರೆ ಇದೆ. ಧನಂಜಯ ಶಿಲ್ಪಿ, ನಾಡೋಜ ನಾಗಣ್ಣ ಬಡಿಗೇರ, ಶಾಂತಲಿಂಗಪ್ಪ ಪಾಟೀಲ್​, ಶಂಕರರಾವ್​ ಆಳಂದಕರ್​, ಡಾ.ಎಸ್​.ಎಂ. ಪಂಡಿತ ಇತರರು ದೃಶ್ಯಕಲಾ ೇತ್ರಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಹಣಮಂತ ಬಾಡದ ಅವರು ತಮ್ಮ ಅದ್ಭುತವಾದ ಸಮಕಾಲೀನ ಶಿಲ್ಪಕಲಾಕೃತಿ ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಯಾದಗಿರಿ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಾತನಾಡಿ, ಕಲಾವಿದರ ಮನಸ್ಸು ದೊಡ್ಡದು, ಇಲಾಖೆ ನೀಡಿರುವ ಕಡಿಮೆ ಧನಸಹಾಯದೊಂದಿಗೆ ಸ್ವಂತ ಹಣ ಖರ್ಚು ಮಾಡಿ ಕಲಾ ಪ್ರದರ್ಶನ ಏರ್ಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಮೊತ್ತ ಹೆಚ್ಚಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಿ ಆರ್ಟ್​ ಇಂಟಿಗ್ರೇಶನ್​ ಚಿತ್ರಕಲಾ ಮಹಾವಿದ್ಯಾಲಯದ ಎಂ.ಎಚ್​. ಬೆಳಮಗಿ ಮಾತನಾಡಿ, ಕಲಾವಿದರು ಸ್ವತಂತ್ರ ಮನೋವೃತ್ತಿಯಿಂದ ಕಲಾಕೃತಿ ರಚಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಹಿರಿಯ ಕಲಾವಿದರ ಸಲಹೆ ಪಡೆಯಬೇಕು. ವಿವಿಧ ಸಾಂಸತಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಹಣಮಂತ ಬಾಡದ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದರಾದ ಬಾಬುರಾವ್​ ಎಚ್​., ಅಶೋಕ ಶೆಟಕಾರ್​, ನಿಂಗಣ್ಣ ಕೇರಿ, ಸಂಗಯ್ಯ ಹಳ್ಳದಮಠ, ಶಿವಾನಂದ ಹಕೀಮ್​, ಡಾ.ಪರಶುರಾಮ ಪಿ., ದಾನಯ್ಯ ಚೌಕಿಮಠ, ಪ್ರಶಾಂತಕುಮಾರ ಜಿ., ಗೋಪಾಲ ಕೆ.ಪಿ., ಕವಿತಾ ಕಟ್ಟೆ, ವೆಂಕಟೇಶ ಪಾಟೀಲ್​, ಜಲಜಾ ಕುಲಕರ್ಣಿ, ಮೌನೇಶ ಬಡಿಗೇರ ಇತರರಿದ್ದರು. ಕಲಾವಿದ ಬಿ.ಎನ್​. ಪಾಟೀಲ್​ ನಿರೂಪಣೆ ಮಾಡಿದರು. ಬಸವರಾಜ ಕಮಾಜಿ ವಂದಿಸಿದರು.
"

ಕಲ್ಯಾಣ ಕರ್ನಾಟಕದ ಶಿಲ್ಪಕಲೆ ಭಾರತೀಯ ಪಾರಂಪರಿಕ ಶಿಲ್ಪಕಲೆಗೆ ಬಹುದೊಡ್ಡ ಕೊಡುಗೆ ನೀಡಿದೆ, ಹಂಪಿ, ಆನೆಗೊಂದಿ, ಸನ್ನತಿ, ಕಾಳಗಿ ಮತ್ತು ಜಲಸಂಗಿಯಂತಹ ಸ್ಥಳಗಳಲ್ಲಿರುವ ಶಿಲಾಶಿಲ್ಪಗಳು ವಿಶ್ವ ವಿಖ್ಯಾತವಾಗಿದ್ದು, ಈ ನೆಲದ ಹೆಮ್ಮೆ.

— > ಡಾ.ಶಿವಾನಂದ ಬಂಟನೂರ ಸಹಾಯಕ ಪ್ರಾಧ್ಯಾಪಕ, ಸಿಯುಕೆ ಕಲಬುರಗಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net