ಬೇಲೂರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನರಸೀಪುರ ಕ್ಷೇತ್ರದ ಶಾಸಕ ಡಾ.ಎಚ್.ಸಿ.ಮಹದೇವಪ್ಪ
ಸಂಪುಟದಲ್ಲಿ ಸ್ಥಾನ ಕಲ್ಪಿಸಿಲ್ಲ
ಬೇಲೂರು:
ತಿ.ನರಸೀಪುರ ಕ್ಷೇತ್ರದ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿಲ್ಲ ಎಂದು ಆರೋಪಿಸಿ ಬಸವೇಶ್ವರ ವೃತ್ತದಲ್ಲಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
ರಾಜ್ಯ ರಾಜಕಾರಣದಲ್ಲಿ ಹಿರಿಯ ಅನುಭವಿ ನಾಯಕರಾಗಿರುವ ಮಹದೇವಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ದೊರೆಯದಿರುವುದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮಹದೇವಪ್ಪ ಅವರ ನಾಯಕತ್ವ ಹತ್ತಿಕ್ಕಲು ಷಡ್ಯಂತ್ರ ಮಾಡಿದವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಪುರಸಭೆ ಮಾಜಿ ಅಧ್ಯಕ್ಷ ಸಿ.ಎನ್.ದಾನಿ ಕಿಡಿಕಾರಿದರು.
ದಲಿತ ಮುಖಂಡ ನವೀನ್ ಮಾತನಾಡಿ, ಹಿರಿಯರಿಗೆ ಗೌರವ ನೀಡುವುದು ಪಕ್ಷದ ಜವಾಬ್ದಾರಿ. ಅನುಭವ, ಸಾಮರ್ಥ್ಯ ಹಾಗೂ ಜನಪರ ಕಾಳಜಿಯನ್ನು ಹೊಂದಿರುವ ಮಹದೇವಪ್ಪರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಜವಾಬ್ದಾರಿ ನೀಡಬೇಕು ಎಂದರು.
ದಲಿತ ಮುಖಂಡರಾದ ರವಿ, ಸತೀಶ್, ಚಂದ್ರು, ವೆಂಕಟೇಶ, ನಾಗರಾಜ್ ಸೇರಿದಂತೆ ಇತರರಿದ್ದರು.