ಕುರಯ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಜನವರಿ 3ರಂದು ರಾತ್ರಿ 9 ಗಂಟೆ ಸುಮಾರಿಗೆ ಕಾಮದಾಸೆಯಿಂದ ಕಿಟಕಿ ಮೂಲಕ ಶರ್ಮಿಳಾಳ ಮನೆಗೆ ಕುರಯ್ ಪ್ರವೇಶಿಸಿದ್ದಾನೆ. ಈ ವೇಳೆ ಶರ್ಮಿಳಾ ವಿರೋಧ ವ್ಯಕ್ತಪಡಿಸಿದಾಗ, ಆಕೆ ಅರೆಪ್ರಜ್ಞೆ ಹೋಗುವವರೆಗೂ ಆಕೆಯ ಬಾಯಿ ಮತ್ತು ಮೂಗನ್ನು ಕುರಯ್ ಬಲವಂತವಾಗಿ ಮುಚ್ಚಿದ್ದಾನೆ. ಆತನಿಂದ ಬಿಡಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದ ಸಂದರ್ಭದಲ್ಲಿ ಶರ್ಮಿಳಾಗೆ ತೀವ್ರ ಗಾಯಗಳಾಗಿವೆ. ಬಾಯಿ ಮತ್ತು ಮೂಗು ಮುಚ್ಚಿದ್ದರಿಂದ ಶರ್ಮಿಳಾ, ಸಾಕಷ್ಟು ಹೋರಾಟ ನಡೆಸಿ, ಕೊನೆಗೆ ಉಸಿರು ಚೆಲ್ಲಿದ್ದಾಳೆ.