ಲಂಬಾಣಿ ತಾಂಡಾದಲ್ಲಿ "ತೀಜ್​' ಸಂಭ್ರಮ

"Teej" celebrations at Lambani Tanda
"Teej" celebrations at Lambani Tanda
Published on
ಹುಳಿಯಾರು: ಮಣ್ಣಿನ ವಾಸನೆ, ಮೊಳಕೆಯೊಡೆಯುವ ಧಾನ್ಯಗಳ ಸಂಭ್ರಮ ಹಾಗೂ ಸಾಂಪ್ರದಾಯಿಕ ಉಡುಪುಗಳ ಮೆರುಗು..! ಇದು ಚಿಕ್ಕನಾಯಕನಹಳ್ಳಿ ತಾಲೂಕಿನ 58 ಲಂಬಾಣಿ ತಾಂಡಾಗಳಲ್ಲಿ ನಡೆಯುವ 'ತೀಜ್​' ಹಬ್ಬದ ಸಡಗರ.
ಮುಂಗಾರಿನ ಆಗಮನದ ಸಂಕೇತವಾಗಿ ಆಚರಿಸಲಾಗುವ ಈ ವಿಶಿಷ್ಟ ಸಾಂಸತಿಕ ಹಬ್ಬಕ್ಕೆ ಈಗ ಅದ್ಧೂರಿ ಚಾಲನೆ ಸಿಕ್ಕಿದ್ದು, ಒಟ್ಟು 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ತಾಂಡಾದ ಯುವತಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಆಚರಣೆಯು ಕೇವಲ ಧಾರ್ಮಿಕ ವಿಧಿಯಲ್ಲ, ಬದಲಿಗೆ ಸಮೃದ್ಧ ಫಸಲಿಗಾಗಿ ಪ್ರಕೃತಿಯನ್ನು ಪ್ರಾರ್ಥಿಸುವ ವಿಶಿಷ್ಟ ಸಂಪ್ರದಾಯವಾಗಿದೆ.
ಬಿದಿರಿನ ಬುಟ್ಟಿಗಳಲ್ಲಿ ಗೋಧಿ, ಸಜ್ಜೆ ಮುಂತಾದ ಧಾನ್ಯಗಳನ್ನು ಬಿತ್ತಿ, ಪ್ರತಿದಿನ ಅದಕ್ಕೆ ಪೂಜೆ ಸಲ್ಲಿಸಿ ನೀರು ಹಾಕಲಾಗುತ್ತದೆ. ಈ ಮೊಳಕೆಗಳು ಎಷ್ಟು ಚೆನ್ನಾಗಿ ಬೆಳೆಯುತ್ತವೆಯೋ, ಅಷ್ಟು ಸಮೃದ್ಧವಾಗಿ ಮುಂದಿನ ವರ್ಷ ಬೆಳೆ ಬರುತ್ತದೆ ಎಂಬುದು ಇಲ್ಲಿನ ಜನರ ಅಚಲ ನಂಬಿಕೆ.
ಹಬ್ಬದ ಪ್ರಯುಕ್ತ ಯುವತಿಯರು ಮತ್ತು ಮಹಿಳೆಯರು ತಮ್ಮ ಪರಂಪರೆಯ ಉಡುಪುಗಳಾದ ಫೇಟಿಯಾ, ಕಂಚ್ಲಿ ಮತ್ತು ಚಾಂತಿಯಾ ಧರಿಸಿ, ವಿಶೇಷ ಆಭರಣಗಳೊಂದಿಗೆ ಸಜ್ಜಾಗುತ್ತಾರೆ. ತಾಂಡಾದಲ್ಲಿ ಮೊಳಗುವ ಜಾನಪದ ಗೀತೆಗಳು ಮತ್ತು ನೃತ್ಯ ಹಬ್ಬಕ್ಕೆ ಕಳೆ ತರುತ್ತವೆ. ಸೇವಾಲಾಲ್​ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, 9ನೇ ದಿನದಂದು ಈ ಮೊಳಕೆ ಬುಟ್ಟಿಗಳನ್ನು ಹತ್ತಿರದ ಕೆರೆ ಅಥವಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net