ಸಿಎ ಕಚೇರಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ ಆರೋಪಿಗಳು, ಸ್ವಂತ ಹೂಡಿಕೆ ಕಂಪನಿ ಆರಂಭಿಸಿದ್ದರು. ಈ ನಡುವೆ ಅಭಿಷೇಕ್ ಅವರ ಸಂಪೂರ್ಣ ಹಣಕಾಸಿನ ವ್ಯವಹಾರ ಅರಿತಿದ್ದ ಇಬ್ಬರೂ ಹೆಚ್ಚಿನ ಲಾಭದ ಆಮೀಷ ಒಡ್ಡಿ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ಬಳಿಕ ಯಾವುದೇ ಲಾಭ ನೀಡದೇ ಸತಾಯಿಸಿದ್ದರು. ಕೊನೆ ಅಸಲು ಹಣ ಕೊಡುವಂತೆ ಜನವರಿ ತಿಂಗಳಲ್ಲಿ ಪಟ್ಟು ಹಿಡಿದಾಗ ಆರೋಪಿಗಳು ಫೋನ್ ಕರೆಗೆ ಸ್ಪಂದಿಸುವುದನ್ನೇ ನಿಲ್ಲಿಸಿದ್ದರು. ಕಚೇರಿಗೆ ತೆರಳಿ ಹಣ ಕೇಳಿದಾಗ ಆರೋಪಿಗಳು ಸಬೂಬು ಹೇಳುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.