ಅಡುಗೆ ಮನೆ ಜಗಳಕ್ಕೆ ಟೆಕ್ಕಿ ಆತ್ಮಹತ್ಯೆ: ಅಡುಗೆ ಮಾಡಬೇಡ ಎಂದ ಅತ್ತೆ; ನೇಣಿಗೆ ಶರಣಾದ ಸೊಸೆ | Bangalore Techie Suicide
ಮೃತ ಟೆಕ್ಕಿ ಸುಷ್ಮಾ ಮತ್ತು ಪತಿ ಪುನೀತ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ
ಅತ್ತೆ ಅಡುಗೆ ಮಾಡಬೇಡ ಎಂದಿದಕ್ಕೆ ಸೊಸೆ ನೇಣಿಗೆ ಶರಣು
ಗಂಡ ಮತ್ತು ಅತ್ತೆ ಮೇಲೆ ವರದಕ್ಷಿಣೆ ಆರೋಪ
ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ
ಬೆಂಗಳೂರು: ಅತ್ತೆ ಅಡುಗೆ ಮಾಡಲು ಬಿಡುವುದಿಲ್ಲ ಎಂದು ಮನನೊಂದ ಸೊಸೆಯೊಬ್ಬಳು ಅತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ (ಮಾ.3) ಬೆಂಗಳೂರಿ(Bangalore Techie Suicide)ನಲ್ಲಿ ವರದಿಯಾಗಿದೆ.
ಅತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಷ್ಮಾ(35) ಎಂದು ಗುರುತಿಸಲಾಗಿದ್ದು, ಈಕೆ ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳೆಂದು ತಿಳಿದು ಬಂದಿದೆ. ಸುಷ್ಮಾ ಐದು ವರ್ಷದ ಹಿಂದೆ ಪುನೀತ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದು, ಈ ದಂಪತಿಗೆ ನಾಲ್ಕು ವರ್ಷದ ಮಗನಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಆದರೆ ಮದುವೆಯಾಗಿ ಬಂದಾಗಿನಿಂದ ಸಷ್ಮಾ ಮತ್ತು ಅವಳ ಅತ್ತೆ (ಗಂಡನ ತಾಯಿ) ಕಲ್ಪನಾ ನಡುವೆ ಹೊಂದಾಣಿಕೆ ಕೊರತೆಯಿದ್ದು, ಮನೆಯಲ್ಲಿ ನಿರಂತರ ಜಗಳವಾಗುತ್ತಿದ್ದ ಬಗ್ಗೆ ತಿಳಿದುಬಂದಿದೆ.
ಕೇಲವ ಕ್ಷುಲಕ ಕಾರಣಗಳಿಗೆ ಅತ್ತೆ-ಸೊಸೆ ಜಗಳವಾಡುತ್ತಿದ್ದು, ಅತ್ತೆ ಕಲ್ಪನಾ ಸೊಸೆ ಸುಷ್ಮಾಳಿಗೆ ಅಡುಗೆ ಮಾಡಬೇಡ ಎನ್ನುವುದು ಮತ್ತು ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನುವುದು ಸುಷ್ಮಾಳ ಮನೆಯವರ ವಾದವಾಗಿದೆ. ಈ ಹಿಂಸೆಯ ಜೊತೆಗೆ ನನ್ನ ಮಗಳಿಗೆ ವರದಕ್ಷಿಗೆ ಕುರಿತಾಗಿ ಸಹ ಕಿರುಕುಳವನ್ನು ಪುನೀತ್ ಮತ್ತು ಅವನ ತಾಯಿ ಕಲ್ಪನಾ ನೀಡಿದ್ದಾರೆ ಎಂದು ಸುಷ್ಮಾಳ ಮನೆಯವರು ತಿಳಿಸಿದ್ದಾರೆ.
ಈ ರೀತಿಯ ನಾನಾ ಹಿಂಸೆಗಳಿಂದ ಮನನೊಂದ ನನ್ನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದಿರುವ ಸುಷ್ಮಾಳ ಪಾಲಕರು, ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದು, ಸುಷ್ಮಾಳ ಪತಿ ಪುನೀತ್ನನ್ನು ಪೊಲೀಸರು ಬಂಧಿಸಿದ್ದು, ಅತ್ತೆ ಕಲ್ಪನಾಳನ್ನು ಹುಡುಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುನೀತ್ ಹಾಗೂ ಆತನ ತಾಯಿ ಕಲ್ಪನಾ ಮೇಲೆ ವರದಕ್ಷಿಗೆ ಕಿರುಕುಳದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜನ್ಸೀಸ್).