ಶಿಕ್ಷಕರ ನೇಮಕಾತಿ ಪರೀಕ್ಷೆ: ಕೆಇಎ ಮಾದರಿ ಅಳವಡಿಕೆ, ಹೀಗಿದೆ ಹೊಸ ನಿಯಮ

ಶಿಕ್ಷಕರ ನೇಮಕಾತಿ ಪರೀಕ್ಷೆ: ಕೆಇಎ ಮಾದರಿ ಅಳವಡಿಕೆ
ಶಿಕ್ಷಕರ ನೇಮಕಾತಿ ಪರೀಕ್ಷೆ: ಕೆಇಎ ಮಾದರಿ ಅಳವಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಇಲ್ಲಿಯವರೆಗೂ ಶಿಕ್ಷಕರ ನೇಮಕಾತಿಯಲ್ಲಿನ ಅಭ್ಯರ್ಥಿಗಳ ಒಎಂಆರ್ ಶೀಟ್‌ನಲ್ಲಿ ನಾಲ್ಕು ಕಾಲಂ ಇರತ್ತಿದ್ದವು.
  • ಹೊಸ ನಿಮಯಗಳ ಪ್ರಕಾರ, ಪ್ರತಿ ಪ್ರಶ್ನೆಗೂ ಐದು ಆಯ್ಕೆ/ವೃತ್ತಗಳಿರುತ್ತವೆ.
  • ಮೊದಲ ನಾಲ್ಕು ಆಯ್ಕೆಗಳು 1,2,3 ಮತ್ತು 4ರಲ್ಲಿ ಸೂಕ್ತವಾದ ಒಂದು ಉತ್ತರವನ್ನು ಶೇಡ್ ಮಾಡಬೇಕು. ಆ ಪ್ರಶ್ನೆಗೆ ಉತ್ತರಿಸದಿದ್ದಲ್ಲಿ 5ನೇ ಆಯ್ಕೆಯನ್ನು ಶೇಡ್ ಮಾಡಬೇಕು.
  • ಒಂದು ವೇಳೆ ಯಾವುದೇ ಆಯ್ಕೆಯನ್ನು ಶೇಡ್ ಮಾಡದಿದ್ದರೆ, ಆ ಪ್ರಶ್ನೆಗೆ 1/4 ಅಂಕವನ್ನು ಕಡಿತ ಮಾಡಲಾಗುತ್ತದೆ.
ಬೆಂಗಳೂರು:

ನೇಮಕಾತಿ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪರಿಚಯಿಸಿರುವ ಒಎಂಆರ್ ಶೀಟ್‌ನಲ್ಲಿನ 5ನೇ ಕಲಂ ಅನ್ನು ಮಾದರಿಯನ್ನು ಶಾಲಾ ಶಿಕ್ಷಕರ ನೇಮಕಾತಿಗೂ ಅಳವಡಿಸಿಕೊಳ್ಳಲಾಗಿದೆ.

ಇಲ್ಲಿಯವರೆಗೂ ಶಿಕ್ಷಕರ ನೇಮಕಾತಿಯಲ್ಲಿನ ಅಭ್ಯರ್ಥಿಗಳ ಒಎಂಆರ್ ಶೀಟ್‌ನಲ್ಲಿ ನಾಲ್ಕು ಕಾಲಂ ಇರತ್ತಿದ್ದವು. ಹೊಸ ನಿಮಯಗಳ ಪ್ರಕಾರ, ಪ್ರತಿ ಪ್ರಶ್ನೆಗೂ ಐದು ಆಯ್ಕೆ/ವೃತ್ತಗಳಿರುತ್ತವೆ. ಮೊದಲ ನಾಲ್ಕು ಆಯ್ಕೆಗಳು 1,2,3 ಮತ್ತು 4ರಲ್ಲಿ ಸೂಕ್ತವಾದ ಒಂದು ಉತ್ತರವನ್ನು ಶೇಡ್ ಮಾಡಬೇಕು. ಆ ಪ್ರಶ್ನೆಗೆ ಉತ್ತರಿಸದಿದ್ದಲ್ಲಿ 5ನೇ ಆಯ್ಕೆಯನ್ನು ಶೇಡ್ ಮಾಡಬೇಕು.
ಒಂದು ವೇಳೆ ಯಾವುದೇ ಆಯ್ಕೆಯನ್ನು ಶೇಡ್ ಮಾಡದಿದ್ದರೆ, ಆ ಪ್ರಶ್ನೆಗೆ 1/4 ಅಂಕವನ್ನು ಕಡಿತ ಮಾಡಲಾಗುತ್ತದೆ. ವೃತ್ತಗಳನ್ನು ಶೇಡ್ ಮಾಡುವಾಗ ಜಾಗರೂಕತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ನೀಲಿ/ಕಪ್ಪು ಇಂಕು ಬಾಲ್ ಪಾಯಿಂಟ್ ಪೆನ್ ಅನ್ನು ಬಳಸಿಕೊಂಡು ಆಯಾ ಪ್ರಶ್ನೆಗೆ ಸಂಖ್ಯೆಗೆ ಅನುಗುಣವಾಗಿ ಸರಿಯಾದ ಒಂದು ಉತ್ತರದ ವೃತ್ತವನ್ನು ಸಂಪೂರ್ವಾಗಿ ಶೇಡ್ ಮಾಡಬೇಕು.
ಪ್ರತಿ ಪ್ರಶ್ನೆಗಳಿಗೆ ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಳೆಯಲಾಗುತ್ತದೆ. ಉತ್ತರ ಪತ್ರಿಕೆಯಲ್ಲಿ ಸಹಿ ಮಾಡುವ ಮೊದಲು ನೋಂಧಣಿ ಸಂಖ್ಯೆಯನ್ನು ಮತ್ತು ವರ್ಷನ್‌ಕೋಡ್ ಅನ್ನು ಸರಿಯಾಗಿ ನಮೂದಿಸಿದೆಯೇ ಎಂದು ಪರಿಶೀಲಿಸುವಂತೆ ಸೂಚಿಸಲಾಗಿದೆ.

5 ನಿಮಿಷ ಹೆಚ್ಚುವರಿ ಸಮಯ

ಪರೀಕ್ಷೆ ಅವಧಿಯಲ್ಲಿ ಮೂರನೇ ಬೆಲ್ ಆದ ಬಳಿಕ 5ನೇ ಕಾಲಂ ಭರ್ತಿ ಮಾಡಲು 5 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಈ ವೇಳೆ ಅಭ್ಯರ್ಥಿಗಳು ಯಾವ ಕಾಲಂ ಭರ್ತಿ ಮಾಡುತ್ತಿದ್ದಾರೆ ಎಂಬುದನ್ನು ಕೊಠಡಿ ಮೇಲ್ವಿಚಾರಕರು ಗಮನ ಹರಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net