ಟಿಬಿ ಡ್ಯಾಂನ ನವೀಕೃತ 4 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ: ತ್ರಿರಾಜ್ಯ ನಾಯಕರ ಸಮ್ಮುಖದಲ್ಲಿ ಉದ್ಘಾಟನೆ

TB Dam
TB Dam
Published on
ವಿಜಯನಗರ: ತುಂಗಭದ್ರಾ ಜಲಾಶಯದ (TB Dam) ನವೀಕರಣಗೊಂಡ 18, 19, 20 ಮತ್ತು 21ನೇ ಸ್ಟೀಲ್ ಕ್ರಸ್ಟ್ ಗೇಟ್‌ಗಳನ್ನು ಗುರುವಾರ ಕೇಂದ್ರ ಹಾಗೂ ರಾಜ್ಯ ನಾಯಕರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು. ಗೇಟ್‌ಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಟನ್ ಒತ್ತುವ ಮೂಲಕ ನಾಲ್ಕು ಗೇಟ್‌ಗಳನ್ನು ಉದ್ಘಾಟಿಸಲಾಯಿತು. ಪ್ರತಿ ಗೇಟ್‌ಗೆ ಪ್ರತ್ಯೇಕ ಅರ್ಚಕರಿಂದ ಪೂಜೆ ನೆರವೇರಿಸಲಾಯಿತು.
ನಾಲ್ವರು ಗಣ್ಯರಿಂದ ನಾಲ್ಕು ಗೇಟ್‌ಗಳ ಉದ್ಘಾಟನೆ
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಒಂದು ಗೇಟ್ ಲೋಕಾರ್ಪಣೆ ಮಾಡಿದರು. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಲಾ ಒಂದೊಂದು ಗೇಟ್ ಉದ್ಘಾಟಿಸಿದರು.

ಗಂಗಾಧರ ಸ್ವಾಮಿಗಳಿಗೆ ನಮಸ್ಕಾರ

ಕಾರ್ಯಕ್ರಮದ ವೇಳೆ ಡಿ.ಕೆ. ಶಿವಕುಮಾರ್ ಗಂಗಾಧರ ಸ್ವಾಮಿಗಳ ಭಾವಚಿತ್ರಕ್ಕೆ ನಮಸ್ಕರಿಸಿದರು. ಬಳಿಕ ಜಲಾಶಯಕ್ಕೆ ಆಗಮಿಸಿದ ಅವರು ಕೈಮುಗಿದು ಗೌರವ ಸಲ್ಲಿಸಿದರು.
ಕ್ರಸ್ಟ್ ಗೇಟ್‌ಗಳ ವೀಕ್ಷಣೆ
ಉದ್ಘಾಟನೆ ಬಳಿಕ ಡಿ.ಕೆ. ಶಿವಕುಮಾರ್, ಚಂದ್ರಬಾಬು ನಾಯ್ಡು ಹಾಗೂ ರೇವಂತ್ ರೆಡ್ಡಿ ಅವರು ನೂತನ ಕ್ರಸ್ಟ್ ಗೇಟ್‌ಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು. ಈ ವೇಳೆ ಟಿಬಿ ಡ್ಯಾಂ ಅಧಿಕಾರಿಗಳು ಗೇಟ್‌ಗಳ ಅಳವಡಿಕೆ, ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಕಾರ್ಯನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು.
ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಅವರು ಗೇಟ್‌ಗಳ ನಿರ್ಮಾಣ, ಅಳವಡಿಕೆ ಪ್ರಕ್ರಿಯೆ ಹಾಗೂ ಗುಣಮಟ್ಟದ ಬಗ್ಗೆ ತ್ರಿವಳಿ ಸಿಎಂಗಳಿಗೆ ವಿವರಿಸಿದರು. ತುಂಗಭದ್ರಾ ಜಲಾಶಯದ ಸುರಕ್ಷತೆ ಮತ್ತು ನೀರು ನಿರ್ವಹಣೆಯ ದೃಷ್ಟಿಯಿಂದ ಈ ನೂತನ ಸ್ಟೀಲ್ ಗೇಟ್‌ಗಳ ಅಳವಡಿಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net