ಟಾಟಾ ಪವರ್ ಕಂಪನಿ ಅರ್ಜಿ ತಿರಸ್ಕರಿಸಿ

ಸಿಂಧನೂರಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ನೌಕರರ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಎಚ್.ಎಂ.ಅಮರೇಶ, ವಿಷ್ಣು, ವೆಂಕಟೇಶ, ರವಿತೇಜ ಎ.,  ಸರಸ್ವತೆಪ್ಪ, ಎಸ್.ಬಿ.ಹಿರೇಮಠ ಇತರರಿದ್ದರು.
ಸಿಂಧನೂರಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ನೌಕರರ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಎಚ್.ಎಂ.ಅಮರೇಶ, ವಿಷ್ಣು, ವೆಂಕಟೇಶ, ರವಿತೇಜ ಎ., ಸರಸ್ವತೆಪ್ಪ, ಎಸ್.ಬಿ.ಹಿರೇಮಠ ಇತರರಿದ್ದರು.
Published on
ಸಿಂಧನೂರು: ಟಾಟಾ ಪವರ್ ಕಂಪನಿಗೆ ರಾಜ್ಯದಲ್ಲಿ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದೆಂದು ಒತ್ತಾಯಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ನೌಕರರ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. 
ವಿದ್ಯುಚ್ಛಕ್ತಿ, ನೀರು ಹಾಗೂ ಲೋಕೋಪಯೋಗಿ ಮೊದಲಾದ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿಯೇ ಕಾರ್ಯನಿರ್ವಹಿಸಬೇಕು. ಯಾವ ಕಾರಣಕ್ಕೂ ಲಾಭಗಳಿಕೆ ದೃಷ್ಟಿಯಿಂದ ಖಾಸಗಿ ಸಂಸ್ಥೆಗಳಿಗೆ ನೀಡಬಾರದು. 
ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ ಹಾಗೂ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗಳ ಸ್ಥಾಪನೆಗೆ ಬುನಾದಿ ಹಾಕಿದ್ದರು. ಇದೀಗ ಖಾಸಗಿ ಸಂಸ್ಥೆಗೆ ನೀಡುವುದು ಜನವಿರೋಧಿ ನೀತಿಯಾಗಿದ್ದು, ಟಾಟಾ ಪವರ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದರು. 
ಕವಿಪ್ರನಿ ಲೆಕ್ಕಾಧಿಕಾರಿಗಳ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಂ.ಅಮರೇಶ, ಇಂಜಿನಿಯರ್‌ಗಳ ಸಂಘದ ವಿಷ್ಣು, ವೆಂಕಟೇಶ, ರವಿತೇಜ ಎ., ಸಂಘಟನಾ ಕಾರ್ಯದರ್ಶಿ ವೆಂಕಟೇಶ, ಕವಿಪ್ರನಿ ಸಂಘದ ಅಧ್ಯಕ್ಷ ಸರಸ್ವತೆಪ್ಪ, ಎಸ್.ಬಿ.ಹಿರೇಮಠ, ಗೋವಿಂದರಾಜ, ನಾಗೇಶ್ವರರಾವ್, ಶರಣಪ್ಪ, ಶರಣಯ್ಯಸ್ವಾಮಿ ಕುರುಕುಂದ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net