ಈ ಮೂಲಕ ಪರ್ಯಾಯ ಇಂಧನ ಚಲನಶೀಲತೆಯ ಪ್ರಗತಿ ವೇಗಗೊಳಿಸಿರುವ ಕಂಪನಿ, ಸಣ್ಣ ವಾಣಿಜ್ಯ ವಾಹನ ಮತ್ತು ಪಿಕಪ್ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಹೆಚ್ಚಿನ ಹೊರೆ, ದಕ್ಷತೆ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಇಂಟ್ರಾ ವಿ40, ವಾಹನದಲ್ಲಿ ಸಿಎನ್‌ಜಿ ಮತ್ತು ಪೆಟ್ರೋಲ್ ದ್ವಿ ಇಂಧನ ತಂತ್ರಜ್ಞಾನ ಇದೆ. 1,525 ಕೆಜಿ ಸಾಮರ್ಥ್ಯ ಸಾಗಿರುವ ಈ ವಾಹನವು, 9.7 ಅಡಿ ಉದ್ದದ ಲೋಡ್ ಬಾಡಿ ಹೊಂದಿದೆ.