ನಗರದ ಶ್ರೀ ಸಿದ್ದಾರ್ಥ ಲಲಿತ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣವನ್ನು ಎಸ್.ಬಿ.ಸೊಂಡೂರ, ನಾಡಧ್ವಜಾರೋಹಣವನ್ನು ಕಜಾಪ ಜಿಲ್ಲಾಧ್ಯ ಮೋಹನ ಗುಂಡ್ಲೂರ ಹಾಗೂ ಪರಿಷತ್ ಧ್ವಜಾರೋಹಣವನ್ನು ತಾಲೂಕಾಧ್ಯಕ್ಷ ಜಯಾನಂದ ಮಾದರ ನೆರವೇರಿಸುವರು. ಬಳಿಕ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯರ ಮೆರವಣಿಗೆಗೆ ಕಾಂಗ್ರೆಸ್ ಮುಖಂಡ ಡಾ.ಮಹಾಂತೇಶ ಕಡಾಡಿ ಚಾಲನೆ ನೀಡುವರು. ಬಿಇಒಗಳಾದ ಜಿ.ಬಿ.ಬಳಗಾರ, ಪ್ರಕಾಶ ಹಿರೇಮಠ ನೇತೃತ್ವ ವಹಿಸುವರು ಎಂದು ಮಾಹಿತಿ ನೀಡಿದರು. ಬೆಳಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ಗೋಕಾಕ ಶೂನ್ಯ ಸಂಪದನಾಮಠದ ಮುರುರಾಜೇಂದ್ರ ಸ್ವಾಮೀಜಿ, ಅಂಕಲಗಿ ಡಾ.ಅಮರಸಿದ್ಧೇಶ್ವರ ಸ್ವಾಮೀಜಿ ಹಾಗೂ ಹಡಗಿನಾಳದ ಮುತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಹಂಪಿ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ.ಗುರುಪ್ರಸಾದ ಉದ್ಘಾಟಿಸುವರು. ಕಜಾಪ ಅಧ್ಯಕ್ಷ ಜಾನಪದ ಡಾ.ಎಸ್.ಬಾಲಾಜಿ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಿವಿಧ ಜಾನಪದ ಕಲಾವಿದರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದೆ ಎಂದರು.