ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾದ ತಾಲೂಕು ಆಡಳಿತ Rajakaluve

ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾದ ತಾಲೂಕು ಆಡಳಿತ Rajakaluve
ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾದ ತಾಲೂಕು ಆಡಳಿತ Rajakaluve
Published on
ಬಂಗಾರಪೇಟೆ: ರಿಯಲ್​ ಎಸ್ಟೇಟ್​ ಮಾಫಿಯಾ ಒತ್ತುವರಿಯಿಂದ ಕಣ್ಮರೆಯಾಗಿದ್ದ ರಾಜಕಾಲುವೆ ಮರುಸ್ಥಾಪಿಸಲು ಮುಂದಾಗಿರುವ ತಾಲೂಕು ಆಡಳಿತ ಸರ್ವೇ ನಡೆಸಿ, ಒತ್ತುವರಿ ತೆರವಿಗೆ ಮುಂದಾಗಿದೆ. Rajakaluve
ಪಟ್ಟಣದ ಸರ್ವೇ.ನಂ.7ರಲ್ಲಿ ವಿವಿಧ ಸರ್ವೇ ನಂಬರ್​ಗಳ ಮೂಲಕ ಮೂಲಕ ಹಾದು ಹೋಗಿರುವ ರಾಜಕಾಲುವೆ ಮುಚ್ಚಿರುವುದನ್ನು ತೆರುವುಗೊಳಿಸಲು ಪಟ್ಟಣದ ಪ್ರೇಮ್​ ಕುಮಾರ್​ ಎಂಬುವರು ಐಪಿಜಿಆರ್​ ಪ್ರಕಾರ ಕೋಲಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.
ಡಿಸಿ ಆದೇಶದನ್ವಯ 2025ರ ಸೆ.19, 20ರಂದು ತಾಲೂಕು ಸರ್ವೇ ಅಧಿಕಾರಿ, ಕಸಬಾ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಜಂಟಿ ಸರ್ವೇ ನಡೆಸಿ, ಆಗ ಒತ್ತುವರಿಯಾಗಿದ್ದ ಬಗ್ಗೆ ಕ್ರಮ ತೆಗೆದುಕೊಳ್ಳಲು ನಕ್ಷೆಯೊಂದಿಗೆ ತಹಸೀಲ್ದಾರ್​ರಿಗೆ ವರದಿ ಸಲ್ಲಿಸಿದ್ದರು.
ನಂತರ ಕಾಲುವೆ ಮಾರ್ಕಿಂಗ್​ ಮಾಡುವ ವೇಳೆ ಪುರಸಭೆ ಹಾಗೂ ಗ್ರಾಪಂ ಸಿಬ್ಬಂದಿ ಅವಶ್ಯವಿತ್ತು. ಈ ಮಧ್ಯೆ ತಾಲೂಕು ಸರ್ವೇ ಅಧಿಕಾರಿ ಕರ್ತವ್ಯದಿಂದ ಬಿಡುಗಡೆಗೊಂಡ ಕಾರಣ ಮಾರ್ಕಿಂಗ್​ ಕಾರ್ಯ ಅಪೂರ್ಣವಾಯಿತು. ನಂತರ ಅಧಿಕಾರಿಗಳಿಗೆ ಜಂಟಿ ಸರ್ವೇ ಮಾಡಿ, ಒತ್ತುವರಿ ತೆರುವುಗಳಿಸುವಂತೆ ತಹಸೀಲ್ದಾರ್​ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅರ್ಧದಲ್ಲೇ ನಿಂತಿದ್ದ ರಾಜುಕಾಲುವೆ ಒತ್ತುವರಿ ಅಳತೆ ಕಾರ್ಯ ಪೂರ್ಣಗೊಳಿಸುತ್ತಿದ್ದಾರೆ.
ಖಾಸಗಿಯವರು ನಡೆಸಿದ ಸರ್ವೇ ಮೂಲಕ ಒತ್ತುವರಿ ಪತ್ತೆ ಹಚ್ಚಲಾಗಿದೆ. ರಾಜುಕಾಲುವೆ ಸಂಪೂರ್ಣ ಮುಚ್ಚಿ ಹೋಗಿದ್ದು, ಐಷರಾಮಿ ಕಟ್ಟಡ ತಲೆ ಎತ್ತಿವೆ. ಬೇಸಿಗೆ ಪ್ರಾರಂಭವಾಗಿದ್ದು, ಮಳೆಗಾಲದೊಳಗೆ ಒತ್ತುವರಿ ತೆರುವುಗೊಳಿಸಿ ರಾಜಕಾಲುವೆ ವಿಂಗಡಿಸಿದರೆ ಕೆರೆಗೆ ಮಳೆ ನೀರು ಹೋಗಲು ಅನುಕೂಲವಾಗಲಿದೆ.
ನಿವೇಶನಗಳಾಗಿ ಮಾರಾಟ!: ರಿಯಲ್​ ಎಸ್ಟೇಟ್​ ಪ್ರಭಾವದಿಂದ ರಾಜಕಾಲುವೆಗಳನ್ನೇ ನಿವೇಶನಗಳನ್ನಾಗಿ ಗುರುತಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಲಕ್ಷಾಂತರ ರೂ.ಗೆ ಮಾರಾಟ ಮಾಡಿ ಪಂಚಾಯಿತಿಯಲ್ಲಿ ಖಾತೆ ತೆರೆದು ನಂತರ ರಿಜಿಸ್ಟಾರ್​ ಕಚೇರಿಯಲ್ಲಿ ನೋಂದಣಿಯೂ ನಡೆದಿದೆ. ಸಾಲ, ಸೋಲ ಮಾಡಿ ಕಟ್ಟಡಗಳನ್ನು ನಿಮಾರ್ಣ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ಈಗ ಆತಂಕ ಶುರುವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net