

ಪ್ರಮುಖ ಮುಖ್ಯಾಂಶಗಳು
ತರಗತಿ ಕೊಠಡಿಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ಜತೆಗೆ ವಿದ್ಯಾರ್ಥಿಗಳ ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ನೀನು ಸರಿ ಇದ್ದರೆ ಸಮಾಜ ಹಾಗೂ ದೇಶವೂ ಸರಿಯಾಗಿರುತ್ತದೆ ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು. ಕಲಿಕೆಯ ಸಂದರ್ಭದಲ್ಲಿ ಮಕ್ಕಳ ಸಾಮರ್ಥ್ಯ ಕುಗ್ಗಿಸುವ ಮಾತುಗಳ ಬದಲು, ಇದು ಅಷ್ಟೊಂದು ಕಠಿಣವಲ್ಲ, ತುಂಬಾ ಸರಳ ಎಂದು ಹೇಳಿ ಆತ್ಮವಿಶ್ವಾಸ ತುಂಬುವ ಕೆಲಸ ಶಿಕ್ಷಕರಿಂದ ಆಗಬೇಕು.
ಮೌಲ್ಯಾಧಾರಿತ, ಹೃದಯಸ್ಪರ್ಶಿ ಶಿಕ್ಷಣದ ಅಗತ್ಯವಿದೆ. ರಾಷ್ಟ್ರದ ಪ್ರಗತಿ ಶಿಣದ ಮೇಲೆ ಅವಲಂಬಿಸಿದೆ. ಒಬ್ಬ ಉತ್ತಮ ಶಿಕ್ಷಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾನೆ.