ಕೃಷಿ ಇಲಾಖೆ ಯೋಜನೆಗಳ ಲಾಭ ಪಡೆಯಿರಿ

ಚಿಂಚೋಳಿ ತಾಲೂಕಿನ ಗೌಡನಹಳ್ಳಿಯಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಲಾಯಿತು. ವಿಜಯಕುಮಾರ ಹುಳಗೇರಿ, ಶ್ರೀನಿವಾಸ ಘಾಲಿ, ಗೋಪಾಲ ಎಂ.ಪಿ., ಪರಮೇಶ್ವರ ಚಿಕ್ಕಣ್ಣ, ಇಂದುಶೇಖರ ಕುರಾ, ಸತೀಶ ದುಕಾನದಾರ, ಜಗನ್ನಾಥ ತಾಂಡೂರ ಇತರರಿದ್ದರು.
ಚಿಂಚೋಳಿ ತಾಲೂಕಿನ ಗೌಡನಹಳ್ಳಿಯಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಲಾಯಿತು. ವಿಜಯಕುಮಾರ ಹುಳಗೇರಿ, ಶ್ರೀನಿವಾಸ ಘಾಲಿ, ಗೋಪಾಲ ಎಂ.ಪಿ., ಪರಮೇಶ್ವರ ಚಿಕ್ಕಣ್ಣ, ಇಂದುಶೇಖರ ಕುರಾ, ಸತೀಶ ದುಕಾನದಾರ, ಜಗನ್ನಾಥ ತಾಂಡೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಮ್ರಾನ್​ ಅಲಿ ಸುಲೇಪೇಟ ಕರೆ
  • ಗೌಡನಹಳ್ಳಿಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ
ಚಿಂಚೋಳಿ: ರೈತರು ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಲಾಭ ಪಡೆದುಕೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಇಮ್ರಾನ್​ ಅಲಿ ಸುಲೇಪೇಟ ಹೇಳಿದರು.
ಗೌಡನಹಳ್ಳಿಯ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆ ಸಮಾರಂಭಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರನ್ನು ಕಸ್ಕೋಟಾ ಪರಾವಲಂಬಿ ಕಳೆ ಸಾಕಷ್ಟು ಕಾಡಿದ್ದು, ತೊಗರಿ, ಉದ್ದು, ಹೆಸರು ಸೇರಿ ಹಲವು ಬೆಳೆಗಳು ಹಾಳಾಗಿವೆ. ಇದೀಗ ಈ ಕಳೆ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪ್ರಮುಖರಾದ ವಿಜಯಕುಮಾರ ಹುಳಗೇರಿ, ಶ್ರೀನಿವಾಸ ಘಾಲಿ, ಗೋಪಾಲ ಎಂ.ಪಿ., ಪರಮೇಶ್ವರ ಚಿಕ್ಕಣ್ಣ, ಇಂದುಶೇಖರ ಕುರಾ, ಸತೀಶ ದುಕಾನದಾರ, ಜಗನ್ನಾಥ ತಾಂಡೂರ, ಬಸವರಾಜ ತಾಂಡೂರ, ವೀರಪ್ಪ ಪಾಟೀಲ್​, ಚಂದ್ರಶೇಖರ ಜಮಾದಾರ, ಲ್ಮಕಾಂತ ಶಂಕೂರ, ಸಂಜಯ್ಯ ಗುತ್ತೇದಾರ್​, ಶರಣಪ್ಪ ಅವಂಟಿ, ಜಗನ್ನಾಥ ಮೇತ್ರಿ, ರೇವಣಸಿದ್ದಪ್ಪ ಮೇಲಿನಕೇರಿ, ಅಕ್ರಂ ಕೋರಬಾ, ನಾಗೇಂದ್ರಪ್ಪ ಚಿಕ್ಕಣ್ಣ, ಬಸವರಾಜ ಹುಳಗೇರಿ, ವಿಜಯಲ್ಮ ಜುಕಾಲಿ, ಅನುಶಮ್ಮ ಜಮಾದಾರ, ಲ್ಮಬಾಯಿ ತಗಲಿ, ಹಬೀಬ್​ಸಾಬ್​ ಯಲಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net