ಸ್ಥಳೀಯವಾಗಿ ತಯಾರಾಗುವ ಡ್ರಗ್ಸ್, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗದಂತಹ ನಗರಗಳಿಗೆ ತಲುಪಿಸುವುದು ಸುಲಭವಾಗುತ್ತದೆ. ಅಲ್ಲದೇ ಬೆಲೆ ಕಡಿಮೆ, ಬಳಕೆ ಹೆಚ್ಚಳವಾಗುತ್ತಿದೆ. ಹೊರಗಿನಿಂದ ಸಾಗಾಟದ ವೆಚ್ಚ ಕಡಿಮೆಯಾಗುವುದರಿಂದ ಡ್ರಗ್ಸ್ ಬೆಲೆ ಕಡಿಮೆಯಾಗಬಹುದು. ಇದು ಯುವಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುತ್ತದೆ. ಪ್ಯಾಕೇಜಿಂಗ್, ಸ್ಟೋರೇಜ್, ಟ್ರಾನ್ಸ್‌ಪೋರ್ಟ್ ಎಲ್ಲವೂ ಸ್ಥಳೀಯ ಮಟ್ಟದಲ್ಲೇ ನಡೆಯುವುದರಿಂದ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಮಾಡಿಕೊಳ್ಳುವ ಉದ್ದೇಶವಾಗಿದೆ.