480 ಕೆರೆಗಳ ಸರ್ವೇ ಕಾರ್ಯ ಪೂರ್ಣ Bhumi Puja

ಮುಳಬಾಗಿಲು Bhumi Puja ತಾಲೂಕು ದೊಡ್ಡಮಾದೇನಹಳ್ಳಿಯಿಂದ ವಿರುಪಾಕ್ಷಿ ಗ್ರಾಮದವರೆಗೂ 60 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಮಾಜಿ ನಿರ್ದೇಶಕ ನಗವಾರ ಎನ್​.ಆರ್​. ಸತ್ಯಣ್ಣ, ಡಿಸಿಸಿ ಬ್ಯಾಂಕ್​ ನಿರ್ದೇಶಕ ವಿ. ರಘುಪತಿರೆಡ್ಡಿ ಇದ್ದರು.
ಮುಳಬಾಗಿಲು Bhumi Puja ತಾಲೂಕು ದೊಡ್ಡಮಾದೇನಹಳ್ಳಿಯಿಂದ ವಿರುಪಾಕ್ಷಿ ಗ್ರಾಮದವರೆಗೂ 60 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಮಾಜಿ ನಿರ್ದೇಶಕ ನಗವಾರ ಎನ್​.ಆರ್​. ಸತ್ಯಣ್ಣ, ಡಿಸಿಸಿ ಬ್ಯಾಂಕ್​ ನಿರ್ದೇಶಕ ವಿ. ರಘುಪತಿರೆಡ್ಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಮೃದ್ಧಿ ವಿ.ಮಂಜುನಾಥ್​ ಮಾಹಿತಿ
  • ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಮುಳಬಾಗಿಲು: ತಾಲೂಕಿನ 672 ಕೆರೆಗಳಲ್ಲಿ 480 ಕೆರೆಗಳ ಸರ್ವೇ ಕಾರ್ಯ ಮುಗಿದಿದೆ. Bhumi Puja ಭೂ ಮಾಫಿಯಾ ಕಪಿಮುಷ್ಠಿಯಲ್ಲಿದ್ದ ಕೆರೆಗಳ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಕೆರೆಗಳಲ್ಲಿ ನೀರು ಕಡಿಮೆಯಾದ ನಂತರ 192 ಕೆರೆಗಳ ಸರ್ವೇ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್​ ತಿಳಿಸಿದರು.
ತಾಲೂಕಿನ ದೊಡ್ಡಮಾದೇನಹಳ್ಳಿಯಿಂದ ವಿರುಪಾಕ್ಷಿ ಗ್ರಾಮದವರೆಗೂ 60 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರಧಾನಮಂತ್ರಿ ರೋಜ್​ಗಾರ್​ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ 75ರಿಂದ ದೊಡ್ಡ ಮಾದ್ಯನಹಳ್ಳಿವರೆಗೆ 1 ಕೋಟಿ 65 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮುಳಬಾಗಿಲು ತಾಲೂಕಿನಲ್ಲಿ ಕೆರೆಗಳ ಭೂ ಮಾಫಿಯಾ, ಮರಳು ಮಾಫಿಯ, ಮೆಡಿಕಲ್​ ಮಾಫಿಯಾಗಳಿಗೆ ಕಡಿವಾಣ ಹಾಕಲಾಗಿದೆ. ಅಕ್ರಮ ಮರಳು ದಂಧೆ ನಡೆಯುವ ಸಂದರ್ಭದಲ್ಲಿ 344 ಟ್ರಾ$್ಯಕ್ಟರ್​ಗಳನ್ನು ಹಿಡಿದು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ವಿಚಾರದಲ್ಲಾಗಲಿ ಸ್ಥಳಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಮುಳಬಾಗಿಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1,300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಿಂದ ಬರುವ ಬಡ ವಿದ್ಯಾರ್ಥಿಗಳಿಗಾಗಿ ಕಡಿಮೆ ವೆಚ್ಚದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ದೊರೆಯಲು ಕ್ಯಾಂಟೀನ್​ ಪ್ರಾರಂಭಿಸಲಾಗಿದೆ. ಆದ್ದರಿಂದ ಈಗ 2,400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಸರ್ಕಾರಕ್ಕೆ ಈಗಾಗಲೇ ಮುಳಬಾಗಿಲು ತಾಲೂಕು ಅಭಿವೃದ್ಧಿಗಾಗಿ 46 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ. ಗ್ರಾಮಸ್ಥರ ಬೇಡಿಕೆಯಂತೆ ದೊಡ್ಡ ಮಾದೇನಹಳ್ಳಿಯಲ್ಲಿ ಊರಿನ ಮಧ್ಯೆ ಹೈಮಾಸ್ಟ್​ ವಿದ್ಯುತ್​ ಬೀದಿ ದೀಪ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲನಿಯಲ್ಲಿ ಹೈಮಾಸ್ಟ್​ ದೀಪ ಅಳವಡಿಸಿ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಎಚ್​.ಗೊಲ್ಲಹಳ್ಳಿ ಮಾಜಿ ಗ್ರಾಪಂ ಅಧ್ಯಕ್ಷ ಜಿ.ಎಸ್​. ಜಗದೀಶ್​, ಆವಣಿ ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷಿ$್ಮಪ್ರಿಯ, ಜಿಲ್ಲಾ ಸಹಕಾರಿ ಯೂನಿಯನ್​ ನಿರ್ದೇಶಕ ಲಕ್ಷಿ$್ಮನಾರಾಯಣ, ವಕೀಲ ವಿ.ಜಯಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net