ರೈತರ ಅಗತ್ಯಕ್ಕನುಗುಣ ರಸಗೊಬ್ಬರ ಪೂರೈಸಿ

ದೇವರಾಜ ನಾಯಕ
ದೇವರಾಜ ನಾಯಕ
Published on

ಪ್ರಮುಖ ಮುಖ್ಯಾಂಶಗಳು

  • ಬಂಜಾರ ಸಂಘದ ಅಧ್ಯಕ್ಷ ದೇವರಾಜ ನಾಯಕ ಆಗ್ರಹ
  • ವಿದ್ಯುತ್​ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ
ಯಾದಗಿರಿ : ಮುಂಗಾರು ಬಿತ್ತನೆಗಾಗಿ ರೈತರಿಗೆ ಅಗತ್ಯವಿರುವಷ್ಟು ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಪೂರೈಸಬೇಕು ಎಂದು ರಾಜ್ಯ ಬಂಜಾರ ಸಂಘದ ಅಧ್ಯಕ್ಷ ದೇವರಾಜ ನಾಯಕ ಒತ್ತಾಯಿಸಿದರು.
ಎಕರೆಗೆ ಡಿಎಪಿ ಮತ್ತು ಯೂರಿಯಾ ತಲಾ ಒಂದೊಂದು ಚೀಲ ನೀಡದೆ ಕೃಷಿಕರ ಬೇಡಿಕೆಗೆ ಅನುಗುಣ ಕೊಡಬೇಕು. ರಸಗೊಬ್ಬರ ಪಡೆಯಲು ಎಫ್​ಐಡಿ ಕಡ್ಡಾಯಗೊಳಿಸಿರುವ ಅಧಿಕಾರಿಗಳು ಏಪ್ರಿಲ್​ ಮತ್ತು ಮೇನಲ್ಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಸಭೆಗಳನ್ನು ನಡೆಸಬೇಕಿತ್ತು. ಇದ್ದಕ್ಕಿದ್ದಂತೆ ಈ ಎಫ್​ಐಡಿ ಕಡ್ಡಾಯ ಮಾಡಿರುವುದಕ್ಕೆ ರೈತರು ಪರದಾಡುವಂತಾಗಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೃಷಿ ಚಟುವಟಿಕೆಗೆ ಅನುಕೂಲವಾಗಲು ನಿರಂತರ ಏಳು ತಾಸು ವಿದ್ಯುತ್​ ಪೂರೈಸಬೇಕು. ನಡುರಾತ್ರಿ ಅಥವಾ ಬೆಳಗ್ಗಿನ ಜಾವ ವಿದ್ಯುತ್​ ನೀಡುವುದರಿಂದ ರೈತರು ವಿಷಜಂತುಗಳ ಭೀತಿಯಲ್ಲೇ ಹೊಲಗಳಿಗೆ ತೆರಳಬೇಕಾಗಿದೆ. ಕೆಇಬಿ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರ ಪರಿಗಣಿಸಿ ಹಗಲಲ್ಲೇ ಕರೆಂಟ್​ ಕೊಡಬೇಕು ಎಂದು ಒತ್ತಾಯಿಸಿದರು.
ಮಳೆ ಕೊರತೆಯಿಂದ ಬಿತ್ತಿದ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಗ್ರಾಮೀಣ ಪ್ರದೇಶದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರಿಗೆ ಸಮರ್ಪಕ ರಸಗೊಬ್ಬರ ಮತ್ತು ವಿದ್ಯುತ್​ ಪೂರೈಸದಿದ್ದರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಪ್ರಮುಖರಾದ ರವಿ ಕೆ.ಮುದ್ನಾಳ್​, ಖಾಸೀಂಸಾಬ್​ ಗಡ್ಡೆಸೂಗುರು, ಮಾಳಪ್ಪ ಒರಟೂರ, ಮಲ್ಲಪ್ಪ ಬಿಳ್ಹಾರ, ಅಯ್ಯಪ್ಪ ಒರಟೂರ, ನಾಗಪ್ಪ ಬಾಗಲಿ, ಹಣಮಂತ ಬಾಗಲಿ, ಹಣಮಂತ ಕೇಟಿಗಲ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net