ಭಾನುವಾರ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ: ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ

ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
Published on

ಪ್ರಮುಖ ಮುಖ್ಯಾಂಶಗಳು

  • ಭಾನುವಾರ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
  • ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದಿಂದ ರಾಜ್ಯಮಟ್ಟದ ಕಾರ್ಯಕ್ರಮ
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯಲಿರುವ ಕಾರ್ಯಕ್ರಮ

ಬೆಂಗಳೂರು:ಶ್ರೀಜಗದ್ಗುರುರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನುಸರ್ಕಾರದ ಪರವಾಗಿ ಕನ್ನಡ ಮತ್ತುಸಂಸ್ಕೃತಿ ಇಲಾಖೆ ವತಿಯಿಂದಆಯೋಜಿಸಲಾಗಿದ್ದು,ಭಾನುವಾರ ಬೆಳಗ್ಗೆ10.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿವಿವಿಧ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ.

ದೊಡ್ಡಗುಣಿಹಿರೇಮಠದ ಶ್ರೀ ರೇವಣಸಿದ್ದೇಶ್ವರಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸಲಿದ್ದು,ಮುಖ್ಯಮಂತ್ರಿಸಿದ್ದರಾಮಯ್ಯ ಕಾರ್ಯಕ್ರಮಉದ್ಘಾಟಿಸಲಿದ್ದಾರೆ.ಉಪಮುಖ್ಯಮಂತ್ರಿಡಿ.ಕೆ.ಶಿವಕುಮಾರ್,ಸಚಿವರಾದ ಶಿವರಾಜತಂಗಡಗಿ, ಈಶ್ವರಖಂಡ್ರೆ ಮುಖ್ಯ ಅತಿಥಿಗಳಾಗಿಪಾಲ್ಗೊಳ್ಳಲಿದ್ದಾರೆ.ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭೆಯಕಾರ್ಯದರ್ಶಿ ಎಚ್.ಎಂ.ರೇಣುಕಪ್ರಸನ್ನ, ವೀರಶೈವಲಿಂಗಾಯತ ಸಮನ್ವಯ ವೇದಿಕೆ ಅಧ್ಯಕ್ಷಪಾಲನೇತ್ರ, ಯುವಮುಖಂಡ ಮನೋಹರ ಅಬ್ಬಿಗೆರೆ,ಬಿ.ಆರ್.ನವೀನಕುಮಾರ ಮತ್ತಿತರರು ಪಾಲ್ಗೊಳಲಿದ್ದು,ಗಾನಸುಧೆ ಭಜನಾಮಂಡಳಿಯ ಶಿವಶಂಕರ್ ಶಾಸಿಗಳುಮತ್ತು ತಂಡದವರಿಗೆ ಸಂಗೀತ ಕಾರ್ಯಕ್ರಮನಡೆಯಲಿದೆ. ಇದೇವೇಳೆ ರಾಜ್ಯದ ಎಲ್ಲ ಜಿಲ್ಲೆ ಮತ್ತುತಾಲೂಕು ಮಟ್ಟದಲ್ಲಿ ಜಯಂತಿಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net