ಸುಜ್ಜಲೂರು ಸಂಘಕ್ಕೆ 16.5 ಲಕ್ಷ ರೂ. ನಿವ್ವಳ ಲಾಭ

ಸುಜ್ಜಲೂರು ಸೊಸೈಟಿ ವಾರ್ಷಿಕ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಂ.ರಾಜೇಂದ್ರ, ದೊಡ್ಡಯ್ಯ, ಎಚ್.ಬಿ.ಚಂದ್ರು, ಡಿ.ಪಿ.ಸೋಮಶೇಖರ್, ಮಹದೇವಪ್ಪ, ಮಹದೇವಸ್ವಾಮಿ, ಚಂದ್ರಪ್ಪ, ರೇವಣ್ಣ, ಮಹದೇವು, ಶಿವಲಿಂಗಮ್ಮ, ನಾಗಲಾಂಬಿಕಾ ಇದ್ದರು.
ಸುಜ್ಜಲೂರು ಸೊಸೈಟಿ ವಾರ್ಷಿಕ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಂ.ರಾಜೇಂದ್ರ, ದೊಡ್ಡಯ್ಯ, ಎಚ್.ಬಿ.ಚಂದ್ರು, ಡಿ.ಪಿ.ಸೋಮಶೇಖರ್, ಮಹದೇವಪ್ಪ, ಮಹದೇವಸ್ವಾಮಿ, ಚಂದ್ರಪ್ಪ, ರೇವಣ್ಣ, ಮಹದೇವು, ಶಿವಲಿಂಗಮ್ಮ, ನಾಗಲಾಂಬಿಕಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುಜ್ಜಲೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ
  • ವಾರ್ಷಿಕ ಮಹಾಸಭೆ
ಮಳವಳ್ಳಿ: ತಾಲೂಕಿನ ಸುಜ್ಜಲೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಂಘದ ಅಧ್ಯಕ್ಷ ಎಂ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಆರ್.ಅಶೋಕ್ ಮಾತನಾಡಿ, 2025-26ನೇ ಸಾಲಿನಲ್ಲಿ ಸಂಘ ಒಟ್ಟು 63 ಕೋಟಿ ರೂ. ವಹಿವಾಟು ನಡೆಸಿದೆ. ಸಿಬ್ಬಂದಿ ವೇತನ, ಆಡಳಿತಾತ್ಮಕ ಖರ್ಚು-ವೆಚ್ಚಗಳನ್ನು ಭರಿಸಿದ ನಂತರ ಸಂಘವು 16.5 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಎಂ.ರಾಜೇಂದ್ರ ಮಾತನಾಡಿ, ಷೇರುದಾರರ ವಿಶ್ವಾಸ ಮತ್ತು ಸದಸ್ಯರ ಸಹಕಾರದಿಂದಲೇ ಸಂಘಕ್ಕೆ ಲಾಭ ಬಂದಿದೆ. ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ, ಗೊಬ್ಬರ, ಬೀಜ ಪೂರೈಕೆ ಮಾಡುವ ಮೂಲಕ ಸಂಘವು ರೈತಪರವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಧುನಿಕ ಸೇವೆಗಳನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 12 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ದೊಡ್ಡಯ್ಯ, ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾ ನಿರ್ದೇಶಕ ಎಚ್.ಬಿ.ಚಂದ್ರು, ನಿರ್ದೇಶಕರಾದ ಡಿ.ಪಿ. ಸೋಮಶೇಖರ್, ಮಹದೇವಪ್ಪ, ಮಹದೇವಸ್ವಾಮಿ, ಚಂದ್ರಪ್ಪ, ರೇವಣ್ಣ, ಮಹದೇವು, ಶಿವಲಿಂಗಮ್ಮ, ನಾಗಲಾಂಬಿಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net