ಗ್ರಾಮಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸಲಹೆ

ಹುಮನಾಬಾದ್​ ಡಿವೈಎಸ್​ಪಿ ಮಡೋಳಪ್ಪ ನೇತೃತ್ವದ ಪೊಲೀಸ್​ ಅಧಿಕಾರಿಗಳ ತಂಡ ಶನಿವಾರ ಬಸವಕಲ್ಯಾಣ ತಾಲೂಕಿನ ಮಂಠಾಳ ಹಾಗೂ ಮಂಠಾಳ ಠಾಣಾ ವ್ಯಾಪ್ತಿಯ ಗಡಿ ಗ್ರಾಮ ಉಜಳಾಂಬಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿತು. ಸಿಪಿಐ ಅಮೂಲ ಕಾಳೆ, ಮಂಠಾಳ ಪಿಎಸ್​ಐ ಸುವರ್ಣ ಮಲಶೆಟ್ಟಿ  ಇದ್ದರು.
ಹುಮನಾಬಾದ್​ ಡಿವೈಎಸ್​ಪಿ ಮಡೋಳಪ್ಪ ನೇತೃತ್ವದ ಪೊಲೀಸ್​ ಅಧಿಕಾರಿಗಳ ತಂಡ ಶನಿವಾರ ಬಸವಕಲ್ಯಾಣ ತಾಲೂಕಿನ ಮಂಠಾಳ ಹಾಗೂ ಮಂಠಾಳ ಠಾಣಾ ವ್ಯಾಪ್ತಿಯ ಗಡಿ ಗ್ರಾಮ ಉಜಳಾಂಬಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿತು. ಸಿಪಿಐ ಅಮೂಲ ಕಾಳೆ, ಮಂಠಾಳ ಪಿಎಸ್​ಐ ಸುವರ್ಣ ಮಲಶೆಟ್ಟಿ ಇದ್ದರು.
Published on
ಬಸವಕಲ್ಯಾಣ: ಅಪರಾಧ ಕೃತ್ಯತಡೆ ಹಾಗೂ ತನಿಖೆಗೆ ನೆರವಾಗುವ ಉದ್ದೇಶದಿಂದ ಪ್ರಮುಖ ರಸ್ತೆ, ವಾಣಿಜ್ಯ ಕೇಂದ್ರಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳುವಂತೆ ಹುಮನಾಬಾದ್​ ಡಿವೈಎಸ್ಪಿ ಮಡೋಳಪ್ಪ ಸಲಹೆ ನೀಡಿದರು.
ಸಿಸಿಟಿವಿ ಕ್ಯಾಮರಾ ಅಳವಡಿಸುವ ಕುರಿತು ಜಾಗೃತಿ ಮೂಡಿಸಲು ಡಿವೈಎಸ್​ಪಿ ಮಡೋಳಪ್ಪ ನೇತೃತ್ವದಲ್ಲಿ ಪೊಲೀಸ್​ ಅಧಿಕಾರಿಗಳ ತಂಡ ಶನಿವಾರ ಮಂಠಾಳ ಹಾಗೂ ಮಂಠಾಳ ಠಾಣಾ ವ್ಯಾಪ್ತಿಯ ಗಡಿ ಗ್ರಾಮಗಳಾದ ಲಾಡವಂತಿ,ಉಜಳಾಂಬ, ಚಿಟ್ಟಾ(ಕೆ), ಹೊನ್ನಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿತು.
ಗ್ರಾಮಸ್ಥರೊಂದಿಗೆ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಿ, ಗ್ರಾಮಗಳಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸಂದೇಹಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡು ಬಂದರೆ ಕೂಡಲೇ ಸಮೀಪದ ಪೊಲೀಸ್​ ಠಾಣೆಗೆ ಮಾಹಿತಿ ನೀಡಬೇಕು. ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಮತ್ತು ಪೊಲೀಸರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರು ತಮ್ಮ ಪ್ರದೇಶದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ಸ್ಥಳಿಯ ಅಗತ್ಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅವುಗಳಿಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಡಿವೈಎಸ್​ಪಿ ಭರವಸೆ ನೀಡಿದರು. ಸಿಪಿಐ ಅಮೂಲ ಕಾಳೆ, ಮಂಠಾಳ ಪಿಎಸ್​ಐ ಸುವರ್ಣ ಮಲಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net