ಕಲಬುರಗಿಯ ಆದರ್ಶ ಆಸ್ಪತ್ರೆಯಲ್ಲಿ 60 ಜನರ ಮಂಡಿ ನೋವಿಗೆ ಯಶಸ್ವಿ ರೋಬೋಟಿಕ್ ಸರ್ಜರಿ

ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ರೋಗಿಗಳ ಜತೆ ಕಲಬುರಗಿ ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಅಲೋಕ ಪಾಟೀಲ್​ ರೇವೂರ, ಪರಿಣತ ವೈದ್ಯರಾದ ಡಾ.ವೀರೇಶ, ಡಾ.ಅಕ್ಷಯ ಚಿಂಚೋಳಿ.
ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ರೋಗಿಗಳ ಜತೆ ಕಲಬುರಗಿ ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಅಲೋಕ ಪಾಟೀಲ್​ ರೇವೂರ, ಪರಿಣತ ವೈದ್ಯರಾದ ಡಾ.ವೀರೇಶ, ಡಾ.ಅಕ್ಷಯ ಚಿಂಚೋಳಿ.
Published on

ಪ್ರಮುಖ ಮುಖ್ಯಾಂಶಗಳು

  • ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಅಲೋಕ ಪಾಟೀಲ್​ ಮಾಹಿತಿ
  • ಹೆಜ್ಜೆ ಇಡಲು ನೋವು ಅನುಭವಿಸುತ್ತಿದ್ದವರ ಮೊಗದಲ್ಲಿ ಖುಷಿ
 ಕಲಬುರಗಿ: ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಸುಮಾರು 60 ಜನರಿಗೆ ನಾಲ್ಕು ತಿಂಗಳಲ್ಲಿ ರೋಬಾಟಿಕ್​ ಶಸ್ತ್ರಚಿಕಿತ್ಸೆ ಮೂಲಕ 15 ದಿನದಲ್ಲೇ ಮೊದಲಿನಂತೆ ನಡೆಯುವಂತೆ ಮಾಡಲಾಗಿದೆ ಎಂದು ಸೂಪರ್​ ಮಾರ್ಕೆಟ್​ನಲ್ಲಿರುವ ಆದರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಅಲೋಕ ಸಿ.ಪಾಟೀಲ್​ ರೇವೂರ ತಿಳಿಸಿದರು.
ಹೆಜ್ಜೆ ಇಡಲು ಪರೇಶಾನ್​ ಆಗಿ ಭಾರಿ ತ್ರಾಸ್​ ಅನುಭವಿಸುತ್ತಿದ್ದ ಅಜ್ಜಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಚೇತರಿಸಿಕೊಂಡ ಕೆಲ ದಿನಗಳಲ್ಲೇ ಮನೆಯಲ್ಲಿ ಆಯತಪ್ಪಿ ಬಿದ್ದು ಹಿಪ್​ ಜಾಯಿಂಟ್​ ಮುರಿದುಕೊಂಡಿದ್ದರು. ಪರಿಣತ ವೈದ್ಯರ ಜತೆಗೂಡ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗುಣ ಮಾಡಲಾಗಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೊಣಕಾಲು ಕೀಲು ಸವೆದವರು, ಆರ್ಥರೈಟಿಸ್​ ಆಗಿ ತೊಂದರೆ ಅನುಭವಿಸುತ್ತಿದ್ದವರು, ಮಂಡಿನೋವಿನಿಂದ ಬಳಲುತ್ತಿದ್ದ ಆರು ರೋಗಿಗಳು ಈ ಮೊದಲು ವಿವಿಧೆಡೆ ಚಿಕಿತ್ಸೆ ಪಡೆದರೂ ಚೇತರಿಸಿಕೊಳ್ಳದಿದ್ದಾಗ ಆದರ್ಶ ಆಸ್ಪತ್ರೆಗೆ ಬಂದರು. ಕೀಹೋಲ್​ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜಾಯಿಂಟ್​ ರಿಪ್ಲೇಸ್​ಮೆಂಟ್​ ಮಾಡಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ಡಾ.ಅಲೋಕ ಉದಾಹರಣೆ ಸಹಿತ ವಿವರಿಸಿದರು. 
ಕಲ್ಯಾಣ ಕರ್ನಾಟಕದಲ್ಲೇ ರೋಬಾಟಿಕ್​ ಶಸಚಿಕಿತ್ಸೆ ವಿಧಾನ ಅಳವಡಿಸಿಕೊಂಡ ಪ್ರಥಮ ಆಸ್ಪತ್ರೆ ಆದರ್ಶ. ಈ ಶಸ್ತ್ರಚಿಕಿತ್ಸೆಯಲ್ಲಿ ನಿಖರತೆ ಹೆಚ್ಚು. ರೋಗಿಗೆ ಸಾಕಷ್ಟು ಅನುಕೂಲಗಳಿರುವುದರಿಂದ ಜಾಯಿಂಟ್​ ರಿಪ್ಲೇಸ್​ಮೆಂಟ್​ ಯಾವುದೇ ವ್ಯತ್ಯಾಸವಾಗದೆ ಕ್ರಮಬದ್ಧವಾಗಿ ಮಾಡಲಾಗುತ್ತದೆ. ದೀರ್ ಬಾಳಿಕೆ ಬರುವುದರಿಂದ ರೋಗಿಗಳು ಆರಾಮವಾಗಿ ಇರಬಹುದು ಎಂದರು.
ರೋಬಾಟಿಕ್​ ಶಸ್ತ್ರಚಿಕಿತ್ಸೆ ನಂತರ ರೋಗಿಗಳು ಬೇಗ ಗುಣ ಹೊಂದುತ್ತಾರೆ. ಕೆಲವೊಮ್ಮೆ ಅದೇ ದಿನ ಇಲ್ಲವೇ ಮರುದಿನ ನಡೆಯಲು ಪ್ರೇರಣೆ ನೀಡಿ ಪ್ರಯತ್ನಿಸುವುದರಿಂದ ಕೆಲ ದಿನಗಳಲ್ಲೇ ಓಡಾಲು ಶುರುವಿಡುತ್ತಾರೆ. ಇದರ ಖರ್ಚು ಸಹ ಕಡಿಮೆ. ಮೊಣಕಾಲು ನೋವು ಇತರ ರೋಗಿಗಳಿಗೆ ಆದರ್ಶ ಆಸ್ಪತ್ರೆ ಆಶಾಕಿರಣವಾಗಿದೆ ಎಂದು ತಿಳಿಸಿದರು.
ಜಾಯಿಂಟ್​ ರಿಪ್ಲೇಸ್​ಮೆಂಟ್​, ಮೊಣಕಾಲು ಸವೆತವಾಗಿ ಹೃದಯಸಂಬಂಧಿ ಕಾಯಿಲೆ, ಮಧುಮೇಹ, ರಕ್ತದೊತ್ತಡ ಇದ್ದವರಿಗೂ ಪರಿಣತ ವೈದ್ಯರ ಜತೆಗೂಡಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಹೃದ್ರೋಗ ತಜ್ಞ ಡಾ.ಅಯ ಚಿಂಚೋಳಿ, ಅರವಳಿಕೆ ತಜ್ಞ ಡಾ.ವೀರೇಶ ಸೇರಿ ಒಂದು ತಂಡವಾಗಿ ಚಿಕಿತ್ಸೆ ಕೊಡುವುದರಿಂದ ರೋಗಿಗಳಿಗೆ ಯಾವುದೇ ತೊಂದರೆ ಆಗದು ಎಂದು ಹೇಳಿದರು.
ಮೊದಲು ನಡೆಯಲು ಆಗುತ್ತಿರಲಿಲ್ಲ. ಈಗ ಆರಾಮ ಆಗಿ ಓಡಿಕೊಂಡಿದ್ದೇವೆ. ಎಲ್ಲ ಕೆಲಸ ಮಾಡಬಹುದಾಗಿದೆ ಎಂದು ಶಸಚಿಕಿತ್ಸೆ ಮಾಡಿಸಿಕೊಂಡವರು ತಮ್ಮ ಅನುಭವ ಹಂಚಿಕೊಂಡರು.
"

ವೈದ್ಯಕಿಯ ತಂತ್ರಜ್ಞಾನ ನೆರವಿನಿಂದ ಶಸಚಿಕಿತ್ಸೆ ಮಾಡುವುದರಿಂದ ರೋಗಿಗೆ ನೋವು ಮತ್ತು ರಕ್ತಸ್ರಾವ ಕಡಿಮೆ. ಶೀಘ್ರ ಚೇತರಿಸಿಕೊಳ್ಳುತ್ತಾರೆ. ಎಲುಬು ಅಥವಾ ಕೀಲು ಸಮಸ್ಯೆಗಳನ್ನು ರ್ನಿಲಸದೆ ಆರಂಭಿಕ ಹಂತದಲ್ಲೆ ತಜ್ಱ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದರೆ ಬೇಗ ಹುಷಾರ್​ ಆಗಬಹುದು.

— > ಡಾ.ಅಲೋಕ ಪಾಟೀಲ್​ ರೇವೂರ ಆದರ್ಶ ಆಸ್ಪತ್ರೆ ಮುಖ್ಯಸ್ಥ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net