ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಲಿ

ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಎಚ್.ಜಿ.ದರ್ಶನ್, ಚಟ್ನಳ್ಳಿ ಮಹೇಶ್, ಹಿರಿಯೂರು ರೇವಣ್ಣ, ಬಸವರಾಜು, ಶಶಿಧರ್, ಕಲ್ಲಳ್ಳಿ ಮಹೇಶ್, ವೀರಭದ್ರಸ್ವಾಮಿ, ಸದಾನಂದಮೂರ್ತಿ, ಕಲ್ಯಾಣ ಕುಮಾರ್ ಇತರರಿದ್ದರು .
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಎಚ್.ಜಿ.ದರ್ಶನ್, ಚಟ್ನಳ್ಳಿ ಮಹೇಶ್, ಹಿರಿಯೂರು ರೇವಣ್ಣ, ಬಸವರಾಜು, ಶಶಿಧರ್, ಕಲ್ಲಳ್ಳಿ ಮಹೇಶ್, ವೀರಭದ್ರಸ್ವಾಮಿ, ಸದಾನಂದಮೂರ್ತಿ, ಕಲ್ಯಾಣ ಕುಮಾರ್ ಇತರರಿದ್ದರು .
Published on

ಪ್ರಮುಖ ಮುಖ್ಯಾಂಶಗಳು

  • ಆದಾಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್ ಎಚ್.ಜಿ.ದರ್ಶನ್
  • ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನ
ಅರಸೀಕೆರೆ

: ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕೆಂದರೆ ಮೊಬೈಲ್ನಿಂದ ದೂರವಿರಬೇಕು ಎಂದು ಆದಾಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್ ಎಚ್.ಜಿ.ದರ್ಶನ್ ಅಭಿಪ್ರಾಯಪಟ್ಟರು.


ನಗರದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ತರಳಬಾಳು ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಸಮಾರಂಭ ಆಯೋಜನೆಯಾಗಬೇಕಾದರೆ ಇಲ್ಲಿಗೆ ಬಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಕಾರಣ. ಆದ್ದರಿಂದ ಈ ಎಲ್ಲ ಕೀರ್ತಿ ಮಕ್ಕಳಿಗೆ ಸೇರಬೇಕು ಎಂದು ಹೇಳಿದರು.
ವಾಗ್ಮಿ ಚಟ್ನಳ್ಳಿ ಮಹೇಶ್ ಮಾತನಾಡಿ, ಬಸವಣ್ಣನವರ ವಚನವನ್ನು ಮನದಟ್ಟು ಮಾಡಿಕೊಂಡು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದಲ್ಲಿ ಎಲ್ಲರಿಗೂ ಉತ್ತಮ ಹೆಸರು ತರುವಂತಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯೂರು ರೇವಣ್ಣ, ಮೃತ್ಯುಂಜಯ, ಜಿ.ವಿ.ಬಸವರಾಜು, ಜಿ.ಬಿ.ಶಶಿಧರ್, ರಾಂಪುರ ಶೇಖರಪ್ಪ, ಮಾಡಾಳು ವೀರಭದ್ರಸ್ವಾಮಿ, ಕಲ್ಯಾಣ ಕುಮಾರ್, ಸದಾನಂದಮೂರ್ತಿ ಕಲ್ಲಳ್ಳಿ ಮಹೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net