ವಿದ್ಯಾರ್ಥಿಗಳ ಸಾಧನೆ ಸಮಾಜದ ಹೆಮ್ಮೆ

ಹುಮನಾಬಾದ್​ನಲ್ಲಿ  ಗುರುವಾರ ಭಾವಸಾರ ಕ್ಷೇತ್ರಿಯ ಸಮಾಜ ತಾಲೂಕು ಘಟಕದಿಂದ ಎಸ್ಸೆಸ್ಸೆಲ್ಸಿ , ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.  ಪಿಎಸ್​ಐ ಸುರೇಶಕುಮಾರ ಚವ್ಹಾಣ್​, ರಾಜೇಂದ್ರ ಡಯಾಜೋಡೆ, ಸುರೇಶಕುಮಾರ ಖಮೀತ್ಕರ್​  ಇತರರಿದ್ದರು.
ಹುಮನಾಬಾದ್​ನಲ್ಲಿ ಗುರುವಾರ ಭಾವಸಾರ ಕ್ಷೇತ್ರಿಯ ಸಮಾಜ ತಾಲೂಕು ಘಟಕದಿಂದ ಎಸ್ಸೆಸ್ಸೆಲ್ಸಿ , ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪಿಎಸ್​ಐ ಸುರೇಶಕುಮಾರ ಚವ್ಹಾಣ್​, ರಾಜೇಂದ್ರ ಡಯಾಜೋಡೆ, ಸುರೇಶಕುಮಾರ ಖಮೀತ್ಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುರೇಶಕುಮಾರ ಚವ್ಹಾಣ್​ ಅಭಿಮತ
  • ಹುಮನಾಬಾದ್​ನಲ್ಲಿ ಭಾವಸಾರ ಕ್ಷೇತ್ರಿಯ ಸಮಾಜದಿಂದ ಪ್ರತಿಭಾ ಪುರಸ್ಕಾರ
ಹುಮನಾಬಾದ್​: ಶಿಕ್ಷಣವು ವ್ಯಕ್ತಿಯ ಬದುಕಿಗೆ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿಗಳು ನಿರಂತರ ಪರಿಶ್ರಮದ ಮೂಲಕ ಉನ್ನತ ಸಾಧನೆ ಮಾಡುವುದರೊಂದಿಗೆ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಪಿಎಸ್​ಐ ಸುರೇಶಕುಮಾರ ಚವ್ಹಾಣ್​ ಹೇಳಿದರು.
ಪಟ್ಟಣದ ಭಾವಸಾರ ಸಮಾಜ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಭಾವಸಾರ ೇತ್ರಿಯ ಸಮಾಜದ ತಾಲೂಕು ಟಕದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀೆಗಳಲ್ಲಿ ಉತ್ತಮ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು ಕಠಿಣ ಪರಿಶ್ರಮದಿಂದ ಮುನ್ನಡೆಯಬೇಕು. ಪಾಲಕರು ಮತ್ತು ಶಿಕರ ಮಾರ್ಗದರ್ಶನದೊಂದಿಗೆ ಶಿಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಶಿಣಕ್ಕೆ ಸಮಾಜದ ಪೋತ್ಸಾಹ ಅಗತ್ಯವಾಗಿದೆ ಎಂದು.
ಸಮಾಜ ತಾಲೂಕು ಟಕದ ಗೌರವಾಧ್ಯ ರಾಜೇಂದ್ರ ಡಯಾಜೋಡೆ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದರು.
ತಾಲೂಕು ಅಧ್ಯ ಸುರೇಶಕುಮಾರ ಖಮೀತ್ಕರ್​ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಪರಂಪರೆಯನ್ನು ಸಮಾಜ ಮುಂದುವರೆಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಸಾಧಿಸಿ ಸಮಾಜದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಆಶಿಸಿದರು.
ಪ್ರಧಾನ ಕಾರ್ಯದರ್ಶಿ ದಿಗಂಬರ ಖಮೀತ್ಕರ್​, ಕಾರ್ಯದರ್ಶಿ ಮಹಾದೇವ ಡಯಾಜೋಡೆ ಇತರರಿದ್ದರು. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net