ಉನ್ನತ ಅವಕಾಶ ಪಡೆಯಲು ಶ್ರಮಿಸಿ higher-opportunity

ಉನ್ನತ ಅವಕಾಶ ಪಡೆಯಲು ಶ್ರಮಿಸಿ higher-opportunity
ಉನ್ನತ ಅವಕಾಶ ಪಡೆಯಲು ಶ್ರಮಿಸಿ higher-opportunity
Published on
ಶ್ರೀನಿವಾಸಪುರ: ವಿದ್ಯಾರ್ಥಿಗಳು ಪಾಲಕರ ಶ್ರಮ ಅರ್ಥೈಸಿಕೊಂಡು ಗುರುಗಳು ಬೋಧಿಸಿದ ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದು ಎಸ್ಸಿ, ಎಸ್ಟಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಮುನಿರಾಜು ತಿಳಿಸಿದರು.higher-opportunity
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಎಸ್ಸಿ, ಎಸ್ಟಿ ನೌಕರ ಸಮನ್ವಯ ಸಮಿತಿ ತಾಲೂಕು ಘಟಕದಿಂದ ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಅವಕಾಶ ಪಡೆಯಲು ಶ್ರಮಿಸಬೇಕು. ಹೆತ್ತವರಿಗೆ, ಶಾಲೆಗೆ ಕೀರ್ತಿ ತರಬೇಕು ಎಂದರು.
ಮುಳಬಾಗಿಲು ಬಿಇಒ ಕೆ.ಎನ್​.ರಾಮಚಂದ್ರ ಮಾತನಾಡಿ, ಜಗತ್ತು ಗೆಲ್ಲಲು ಹೋಗಬೇಡ. ಮೊದಲು ಜನನಿಯನ್ನು ಗೆಲ್ಲು ಎಂಬ ಮಾತಿನಂತೆ ಹೆತ್ತವರನ್ನು, ನಾಡನ್ನು ಖುಷಿಪಡಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ಹೇಳಿದರು.
ಎಸ್ಸಿ, ಎಸ್ಟಿ ನೌಕರ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಪೆದ್ದಪ್ಪಯ್ಯ ಮಾತನಾಡಿ, ವಿದ್ಯಾರ್ಥಿಗಳು, ಪರಿಶ್ರಮ, ಶಿಸ್ತು ಹಾಗೂ ಗುರಿ ಹೊಂದಿದ ಅಧ್ಯಾಯನದ ಮೂಲಕ ಉತ್ತಮ ಸಾಧನೆ ಮಾಡಬೇಕು. ಶಿಕ್ಷಣವೇ ಜೀವನದಲ್ಲಿ ಯಶಸ್ವಿಗೆ ಪ್ರಮುಖ ಅಸ್ತ್ರ ಎಂದರು.
ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಆರ್ಥಿಕ ನೆರವು ನೀಡಿ, ನಿಮ್ಮ ವಿದ್ಯಾಭ್ಯಾಸಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಜೆಡಿಎಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಹೇಳಿದರು.
ನಿವೃತ್ತ ದೈಹಿಕ ಶಿಕ್ಷಕ ರಮೇಶ್​ರೆಡ್ಡಿ, ಸಮನ್ವಯ ಅಧಿಕಾರಿ ಗೀತಾ, ಮುತ್ತಕಪಲ್ಲಿ ಕಾಲೇಜು ಪ್ರಾಂಶುಪಾಲ ಜಿ.ಕೆ.ನಾರಾಯಣಸ್ವಾಮಿ, ಮುರಳಿ ಬಾಬು, ಸಿ.ವಿ.ನಾರಾಯಣಸ್ವಾಮಿ, ಎನ್​ಪಿಎಸ್​ ನೌಕರ ಸಂಘದ ಅಧ್ಯಕ್ಷ ಅಶೋಕ್​, ಜಿ.ಎಂ.ಶ್ರೀನಿವಾಸ್​, ಸೋಮಶೇಖರ್​, ಕಲಾ ಶಂಕರ್​, ಬಿಆರ್​ಸಿ ಶ್ರೀನಿವಾಸ್​ ಮೂರ್ತಿ, ರಮೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net