ಹೆಚ್ಚುವರಿ ೫೦ ರೂ.ಗಳ ಬಾಕಿ ಪಾವತಿಗೆ ಕಟ್ಟುನಿಟ್ಟಿನ ಸೂಚನೆ

ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಟನ್ ಕಬ್ಬಿಗೆ ಹೆಚ್ಚುವರಿ ೫೦ ರೂ. ಪಾವತಿಸದೇ ಬಾಕಿ ಉಳಿಸಿಕೊಂಡಿರುವ ೮  ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಜಿಲ್ಲಾಽಕಾರಿ ಸಂಗಪ್ಪ  ಅವರು ಸೋಮವಾರ ಸಭೆ ನಡೆಸಿ, ಕೂಡಲೆ ಬಾಕಿ ಪಾವತಿಸುವಂತೆ ಸೂಚನೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಟನ್ ಕಬ್ಬಿಗೆ ಹೆಚ್ಚುವರಿ ೫೦ ರೂ. ಪಾವತಿಸದೇ ಬಾಕಿ ಉಳಿಸಿಕೊಂಡಿರುವ ೮ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಜಿಲ್ಲಾಽಕಾರಿ ಸಂಗಪ್ಪ ಅವರು ಸೋಮವಾರ ಸಭೆ ನಡೆಸಿ, ಕೂಡಲೆ ಬಾಕಿ ಪಾವತಿಸುವಂತೆ ಸೂಚನೆ ನೀಡಿದರು.
Published on

ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆಗಳ ವತಿಯಿಂದ ಪಾವತಿಸಬೇಕಾದ ಹೆಚ್ಚುವರಿ ೫೦ ರೂ.ಗಳನ್ನು ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಕೂಡಲೇ ಪಾವತಿಸುವಂತೆ ಜಿಲ್ಲಾಽಕಾರಿ ಸಂಗಪ್ಪ ಅವರು ಸಕ್ಕರೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಸೋಮವಾರ ಸಂಜೆ ಹೆಚ್ಚುವರಿ ಹಣ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟನ್ ಕಬ್ಬಿಗೆ ಹೆಚ್ಚುವರಿಯಾಗಿ ಪಾವತಿಸಬೇಕಿದ್ದ ೫೦ ರೂ.ಗಳನ್ನು ಬಾದಾಮಿ ಶುರ‍್ಸ್, ಜೆಮ್ ಶುರ‍್ಸ್, ಜಮಖಂಡಿ ಶುರ‍್ಸ್, ಎಂ.ಆರ್.ಎನ್ ಕೇನ್ ಪವರ್ ಲಿಮಿಟೆಡ್, ನಿರಾಣಿ ಶುರ‍್ಸ್, ಪ್ರಭುಲಿಂಗೇಶ್ವರ ಶುರ‍್ಸ್, ಕೇದಾರನಾಥ ಶುರ‍್ಸ್ ಹಾಗೂ ಸಾಯಿಪ್ರಿಯಾ ಶುರ‍್ಸ್ನವರು ಬಾಕಿ ಉಳಿಸಿಕೊಂಡಿದ್ದು, ಈ ಎಲ್ಲ ಕಾರ್ಖಾನೆಯವರು ಪಾವತಿಸುವಂತೆ ಸೂಚನೆ ನೀಡಿದರು.
ರೈತರಿಗೆ ಟನ್ ಕಬ್ಬಿಗೆ ಹೆಚ್ಚವರಿಯಾಗಿ ೧೦೦ ರೂ. ಪಾವತಿಸಬೇಕಿತ್ತು. ಇದರಲ್ಲಿ ಸರ್ಕಾರ ಮತ್ತು ಕಾರ್ಖಾನೆಗಳು ತಲಾ ೫೦ ರೂ. ಪಾವತಿಸಬೇಕು. ಈಗಾಗಲೇ ಸರ್ಕಾರದಿಂದ ಬಿಡುಗಡೆಯಾದ ೫೦ ರೂ.ಗಳ ಸಹಾಯಧನವನ್ನು ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪಾವತಿಸಿವೆ. ಆದರೆ, ಕಾರ್ಖಾನೆಯಿಂದ ನೀಡಬೇಕಾದ ಹೆಚ್ಚುವರಿ ೫೦ ರೂ.ಗಳ ಹಣವನ್ನು ೬ ಕಾರ್ಖಾನೆಗಳು ಮಾತ್ರ ಸಂಪೂರ್ಣವಾಗಿ ಪಾವತಿ ಮಾಡಿವೆ. ಅವರಿಗೆ ಅಭಿನಂಧನೆಗಳನ್ನು ತಿಳಿಸಿದರು.
ಬರುವ ಕಬ್ಬು ನುರಿಸುವ ಹಂಗಾಮಿನಲ್ಲಿ ರೈತರಿಗೆ ಯಾವುದೇ ಗೊಂದಲ ಉಂಟಾಗದAತೆ, ಪ್ರತಿಯೊಂದು ಸಕ್ಕರೆ ಕಾರ್ಖಾನೆಯವರು ತಮ್ಮ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಭೆ ಕರೆದು ಕಬ್ಬಿನ ದರವನ್ನು ನಿಗದಿಪಡಿಸಿದ ನಂತರವೇ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕು ಎಂದರು.
ಸಿಎಸ್‌ಆರ್ ನಿಽಯಲ್ಲಿ ಪರಿಸರ ನಿರ್ಮಾಣ:
ಬಾಗಲಕೋಟೆ ಜಿಲ್ಲೆಯನ್ನು ನಿಸರ್ಗ ಪ್ರಿಯ ಹಾಗೂ ಹಸಿರು ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಖಾನೆಗಳ ಸಿಎಸ್‌ಆರ್ ನಿಽಯಡಿ ಹಸಿರು ಪರಿಸರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ಕಾರ್ಖಾನೆಗೆ ನಿಗದಿಪಡಿಸಿರುವ ೧೦ ಸಾವಿರ ಸಸಿಗಳನ್ನು ಆಯಾ ಕಾರ್ಖಾನೆಗಳಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ನೆಡುವಂತೆ ಕ್ರಮ ಕೈಗೊಳ್ಳಬೇಕು. ನೆಟ್ಟ ಸಸಿಗಳ ಸಂರಕ್ಷಣೆ ಹಾಗೂ ಅವುಗಳ ಬೆಳವಣಿಗೆಯ ಮೇಲೂ ನಿರಂತರವಾಗಿ ನಿಗಾವಹಿಸಬೇಕು ಎಂದು ಜಿಲ್ಲಾಽಕಾರಿಗಳು ತಿಳಿಸಿದರು.
ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಿ :
ಜಿ.ಪಂ ಸಿಇಒ ಗಜಾನನ ಬಾಲೆ ಮಾತನಾಡಿ, ಸಿಎಸ್‌ಆರ್ ನಿಽಯಡಿ ಜಿಲ್ಲೆಯ ೬೦ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಹೇಳಿದರು.
ಆಯಾ ಶಾಲೆಗಳಿಗೆ ಅಗತ್ಯವಿರುವ ಕುಡಿಯುವ ನೀರು, ಶೌಚಾಲಯ, ಕೊಠಡಿಗಳು, ಪೀಠೋಪಕರಣ, ವಿದ್ಯುತ್, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಪಟ್ಟಿಯನ್ನು ಸಂಬAಽಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಽಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಲಿದ್ದಾರೆ. ಈ ಪಟ್ಟಿಯ ಆಧಾರದ ಮೇಲೆ ಶಾಲೆಗಳ ಅಗತ್ಯತೆಗಳನ್ನು ಗುರುತಿಸಿ, ಸಿಎಸ್‌ಆರ್ ನಿಽಯಡಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಽಕಾರಿ ಸ್ವಪ್ನಿಲ್ ಅಹೀರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸಹಕಾರ ಇಲಾಖೆಯ ಉಪ ನಿಬಂಧಕ ದಾನಯ್ಯ ಹಿರೇಮಠ ಸೇರಿದಂತೆ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net