ಮಾನ್ವಿ: ಸಿಂಧನೂರು-ಕಲ್ಮಲಾ ಜಂಕ್ಷನ್ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು, 89ರ ಮುಖ್ಯ ಕಾಲುವೆ ಹಾದು ಹೋಗುವ ರಸ್ತೆಯ ಸೇತುವೆಗೆ ಬೃಹತ್ ಪೈಪ್‌ಗಳನ್ನು ಅಳವಡಿಸಲಾಗಿದೆ.
ಇದರಿಂದ ಕೆಳ ಭಾಗದ ರೈತರಿಗೆ ನೀರು ಹರಿಯದೆ ಸಮಸ್ಯೆಯಾಗಲಿದೆ ಎಂದು ರೈತ ಜೆಲ್ಲಿ ಸಣ್ಣ ರಾಮಣ್ಣ ಅವರು ತಹಸೀಲ್ದಾರ್ ಭೀಮರಾಯ್ ರಾಮಸಮುದ್ರ ಮತ್ತು ನೀರಾವರಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸೇತುವೆಗೆ ಪೈಪ್ ಅಳವಡಿಕೆ ಮಾಡಿದ್ದರಿಂದ 89/6 ಉಪ ಕಾಲುವೆಗೆ ನೀರು ಹರಿಯಲ್ಲ. ಇದರಿಂದ ಕೆಳ ಭಾಗದ ರೈತರಿಗೆ ಸಮರ್ಪಕ ನೀರು ಸಿಗುವುದಿಲ್ಲ.
ಸಿಂಧನೂರಿನ ಕೆಆರ್‌ಡಿಸಿಎಲ್ ವಿಶೇಷ ಭೂ ಸ್ವಾಧೀನಾಧಿಕಾರಿಗಳು 89/6ರ ಉಪ ಕಾಲುವೆ ಸೇತುವೆಗೆ ಈಗಾಗಲೇ ದೊಡ್ಡ ಪೈಪ್ ಅಳವಡಿಸಿದ್ದಾರೆ.
ಇದರಿಂದ ನೀರಮಾನ್ವಿ, ಸೀಕಲ್, ಕೊರವಿ, ಗೋವಿನದೊಡ್ಡಿ, ಚಿಮ್ಲಾಪುರ ಗ್ರಾಮಗಳ ರೈತರ 2500 ಎಕರೆ ಜಮೀನಿಗೆ ಕಾಲುವೆ ನೀರು ತಲುಪಲ್ಲ. ರೈತರು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಕುರಿತು ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.