ಮೋಸ ಬಿಟ್ಟು ಅಭಿವದ್ಧಿಗೆ ಸಹಕಾರ ನೀಡಿ vStop cheating and cooperate with development.

Stop cheating and cooperate with development.
Stop cheating and cooperate with development.
Published on
development ಕುಣಿಗಲ್​: ತಾಲೂಕಿನ ಅಭಿವೃದ್ಧಿ ಬಗ್ಗೆ ಬದ್ಧತೆ ಇಲ್ಲದೆ ಸುಳ್ಳು ಮಾಹಿತಿ ಹೇಳಿ ಜನರನ್ನು ಮರಳು ಹಾಗೂ ಮೋಸ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಬೆಮಲ್​ ಅಧ್ಯ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್​ ಟಾಂಗ್​ ನೀಡಿದರು.
ಪಟ್ಟಣದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್​ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ ಎರಡು ದಶಕದಿಂದ ನನೆಗುದಿಗೆ ಬಿದ್ದಿರುವ ಖಾಸಗಿ ಬಸ್​ ನಿಲ್ದಾಣ ಕಾಮಗಾರಿಗೆ ಈಗ ಶುಭಗಳಿಗೆ ಬಂದಿದೆ. ವಿವಿಧ ಯೋಜನೆಗಳಿಂದ 10 ಕೋಟಿ ರೂ. ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. 2028ರೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡುವ ನಿಟ್ಟಿನಲ್ಲಿ ಗುತ್ತಿಗೆದಾರರು ಕಾಮಗಾರಿಗೆ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.
ಕುಣಿಗಲ್​ ತಾಲೂಕಿಗೆ ಸಮರ್ಪಕವಾಗಿ ಹೇಮಾವತಿ ನೀರು ಹರಿಸದೇ 30 ವರ್ಷದಿಂದ ಅನ್ಯಾಯ ಮಾಡಲಾಗಿದೆ. ಇದನ್ನು ಮನಗೊಂಡು ನಾನು, ಡಿ.ಕೆ.ಶಿವಕುಮಾರ್​ ಹಾಗೂ ಶಾಸಕ ಡಾ.ರಂಗನಾಥ್​ ಲಿಂಕ್​ ಕೆನಾಲ್​ ಯೋಜನೆ ತಂದು ಕೆಲಸ ಪ್ರಾರಂಭಿಸಲಾಗಿದೆ ಎಂದರು.
ಪಟ್ಟಣದ ಕುಡಿಯುವ ನೀರಿ ವ್ಯವಸ್ಥೆ ಸರಿಪಡಿಸಿ ಜನರಿಗೆ ನಿತ್ಯ ನೀರು ಕೋಡುವ ಯೋಜನೆಗೆ 70 ಕೋಟಿ ರೂ. ಅನುದಾನ ತರದಲಾಗಿದೆ. ಮತ್ತು 60 ಕೋಟಿ ರೂ. ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ ಕಾಮಗಾರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಚುನಾವಣೆ ಬರುತ್ತದೆ ಹೋಗುತ್ತದೆ. ಸೋಲು&ಗೆಲುವು ಸ್ವಾಭಾವಿಕ. ಒಬ್ಬರು ಗೆಲ್ಲಬೇಕು. ಚುನಾವಣೆಯಲ್ಲಿ ಈ ಬಾರಿ ಸೋಲಿಸಿದ್ದೀರಾ ಎಂದು ನನಗೆ ಬೇಸರ ಇಲ್ಲ. ಈ ಹಿಂದೆ ತಾಲೂಕಿನ ಅಭಿವೃದ್ಧಿಗೆ ಕೊಟ್ಟ ಮಾತನ್ನು ನಮ್ಮ ಸರ್ಕಾರ ಮತ್ತು ಶಾಸಕರ ಜತೆ ಕೆಜೋಡಿಸಿ ಮಾಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಬೇಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸೇತುವೆಯನ್ನು ಉದ್ಘಾಟಿಸಿದರು. ನಂತರ ಮಂಗಳಾ ಹಾಗೂ ಮಾಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಿ ಭಾಗಿನ ಅರ್ಪಿಸಿದರು.
ಸದಸ್ಯರಾದ ರಂಗಸ್ವಾಮಿ, ಅರುಣ್​ ಕುಮಾರ್​, ನಾಗೇಂದ್ರ, ಶಂಭು ರಾಮಣ್ಣ, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್​, ಪ್ರಚಾರ ಸಮಿತಿ ಅಧ್ಯ ಶಂಕರ್​, ಯುವ ಕಾಂಗ್ರೆಸ್​ ಅಧ್ಯ ಮಾರುತಿ, ಯುವ ಮುಖಂಡ ಬುಲೆಟ್​ ಮೋಹನ್​, ರೇಹಮಾನ್​ ಷರ್​ೀ ಇದ್ದರು.
ಸಿಎಂ ಕುರ್ಚಿ ಖಾಲಿ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್​ ಸಿಎಂ ಆಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಸುರೇಶ್​, ಸಿಎಂ ಕುರ್ಚಿ ಖಾಲಿ ಇಲ್ಲ. ಮುಂದೆ ಹೆಕಮಾಂಡ್​ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net