ಆರೋಪ ನಿಲ್ಲಿಸಿ ಅಭಿವೃದ್ಧಿಗೆ ಸಹಕರಿಸಿ development

ಆರೋಪ ನಿಲ್ಲಿಸಿ ಅಭಿವೃದ್ಧಿಗೆ ಸಹಕರಿಸಿ development
ಆರೋಪ ನಿಲ್ಲಿಸಿ ಅಭಿವೃದ್ಧಿಗೆ ಸಹಕರಿಸಿ development
Published on
ಮುಳಬಾಗಿಲು: ಕೋಲಾರ ಹಾಲು ಒಕ್ಕೂಟದ ಮೇಲೆ ಪುರಾವೆ ಇಲ್ಲದೆ ಆರೋಪ ಮಾಡುವ ಮೂಲಕ ಪ್ರಹಾರ ನಡೆಸುವುದು ತಕ್ಷಣ ನಿಲ್ಲಿಸಿ, ಅಭಿವೃದ್ಧಿಗೆ ಸಹಕರಿಸಬೇಕು. ರೈತರಿಗೆ ಪ್ರತಿ ಲೀ. ಹಾಲಿಗೆ 39 ರೂ. ನೀಡುತ್ತಿದ್ದೇವೆ ಎಂದು ಮುಳಬಾಗಿಲು ಪೂರ್ವಕ್ಷೇತ್ರದ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ತಿಳಿಸಿದರು.development
ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಕೋಮುಲ್ ಉಪಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ರೈತರ ಜೀವನಾಡಿಗಳಾದ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಎರಡು ಕಣ್ಣುಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈಗ ರಾಜಕೀಯ ಕಾರಣಗಳಿಗೆ ಡಿಸಿಸಿ ಬ್ಯಾಂಕ್‌ಅನ್ನು ನಿಷ್ಕ್ರಿಯಗೊಳಿಸಿದ್ದು, ಲಕ್ಷಾಂತರ ಮಹಿಳೆಯರು, ರೈತರು ಆರ್ಥಿಕವಾಗಿ ತೊಂದರೆಗೆ ಒಳಗಾಗಿದ್ದಾರೆ ಎಂದರು.
ಸತ್ಯಕ್ಕೆ ದೂರವಾದ ವಿಷಯಗಳು ಬಹುಬೇಗ ಪ್ರಚಾರಗೊಳ್ಳುತ್ತವೆ. ನಿತ್ಯ ಹಾಲು ಒಕ್ಕೂಟದ ಬಗ್ಗೆ ಅಪಪ್ರಚಾರದ ಸುದ್ದಿಗಳು ಪ್ರಚಾರಗೊಳ್ಳುತ್ತಿವೆ. ಇವು ಸತ್ಯಕ್ಕೆ ದೂರ, ಚಿಕ್ಕಬಳ್ಳಾಪುರ ಜಿಲ್ಲೆ ಪ್ರತ್ಯೇಕಗೊಂಡ ನಂತರ ಕೋಮುಲ್‌ನಲ್ಲೇ ಪ್ರತಿದಿನ 9 ಲಕ್ಷ ಲೀಟರ್ ಸಂಗ್ರಹ ಗುರಿಯತ್ತ ಸಾಗುತ್ತಿದೆ ಎಂದರು.
60 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೋಲಾರ್ ವಿದ್ಯುತ್ ಪ್ಲಾಂಟೇಷನ್‌ನಿಂದ ಪ್ರತಿ ತಿಂಗಳು 10 ಕೋಟಿ ರೂ.ಲಾಭ ಬರುತ್ತದೆ. ಇದರಿಂದ ರೈತರಿಗೆ 2 ರೂ. ನೀಡುತ್ತಿದ್ದೇವೆ, ಈಗಾಗಲೇ ಟೆಟ್ರಾಪ್ಯಾಕ್ ವ್ಯವಸ್ಥೆಯಲ್ಲಿ ನಾವೇ ಪ್ರಥಮ ಸ್ಥಾನದಲ್ಲಿದ್ದೇವೆ. ದೇಶದ ನಾನಾ ಭಾಗಗಳಿಗೆ ಅಲ್ಲದೆ ಸೈನಿಕರಿಗೂ ಪೂರೈಕೆಯಾಗುತ್ತಿದೆ. ಈ ರೀತಿ ಸೇವೆ ಮಾಡುತ್ತಿದ್ದರೂ ಆರೋಪ ನಿಂತಿಲ್ಲ ಎಂದು ಬೇಸರಿಸಿದರು.
ಮುಳಬಾಗಿಲು ಪಶ್ಚಿಮ ನಿರ್ದೇಶಕ ಬಿ.ವಿ.ಸಾಮೇಗೌಡ ಮಾತನಾಡಿ, ರಾಜ್ಯ ಸರ್ಕಾರದ ಎರಡು ಗುಂಪುಗಳ ಕಿತ್ತಾಟದಿಂದ ಜಲ್ಲೆಯ 2 ಸಹಕಾರಿ ಸಂಸ್ಥೆಗಳ ಮೇಲೆ ಕೆಸರು ಚೆಲ್ಲುವ ಕೆಲಸ ಮಾಡಲಾಗುತ್ತಿದೆ. ಜತೆಗೆ ಕೆಲವರು ಒಕ್ಕೂಟಕ್ಕೆ ಬಂದು ಪ್ರಶ್ನೆ ಮಾಡಿ ಮಾಹಿತಿ ಪಡೆದು ಖಾಲಿ ಕೈಯಲ್ಲಿ ಹೊರಹೋಗುವಾಗ ನೊಂದು ಈ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖೇದಕರ ಎಂದರು.
ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬೆಳಗಾನಹಳ್ಳಿ ಬಿ.ಎಂ. ವೆಂಕಟರಮಣಪ್ಪ, ತಾಪಂ ಮಾಜಿ ಸದಸ್ಯ ನಗವಾರ ಶ್ರೀನಿವಾಸ್, ವಕೀಲ ಹರೀಶ್, ತಾಲೂಕಿನ ವಿವಿಧ ಗ್ರಾಮಗಳ ಡೇರಿ ಅಧ್ಯಕ್ಷರಾದ ಪೊಂಬರಹಳ್ಳಿ ಮಂಜುನಾಥ್, ವಾಣಿಗಾನಹಳ್ಳಿ ಎ.ಸಿ.ಕೃಷ್ಣಪ್ಪ, ಗೊಲ್ಲಹಳ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net