ಮಾದಕ ವಸ್ತುಗಳಿಂದ ದೂರವಿದ್ದರೆ ಉತ್ತಮ ಆರೋಗ್ಯ

ಅರಕಲಗೂಡಿನಲ್ಲಿ ಏರ್ಪಡಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು  ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಕೆ. ಸತೀಶ್ ಉದ್ಘಾಟಿಸಿದರು. ಪುಷ್ಪಲತಾ, ಪರಶುರಾಮ ಶಿರೂರ, ತೌಪಿಕ್ ಅಹಮದ್, ಯೋಗನಾಥ್, ರಮೇಶ್ ವಾಟಾಳ್ ಇತರರಿದ್ದರು.
ಅರಕಲಗೂಡಿನಲ್ಲಿ ಏರ್ಪಡಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಕೆ. ಸತೀಶ್ ಉದ್ಘಾಟಿಸಿದರು. ಪುಷ್ಪಲತಾ, ಪರಶುರಾಮ ಶಿರೂರ, ತೌಪಿಕ್ ಅಹಮದ್, ಯೋಗನಾಥ್, ರಮೇಶ್ ವಾಟಾಳ್ ಇತರರಿದ್ದರು.
Published on
ಅರಕಲಗೂಡು: ಮಾದಕ ವಸ್ತುಗಳಿಂದ ದೂರವಿದ್ದರೆ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಕೆ. ಸತೀಶ್ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಅದರಲ್ಲೂ ತಂಬಾಕು, ಸಿಗರೇಟ್ ಅತಿಯಾಗಿ ಸೇವಿಸಿ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಬೇಸರದ ಸಂಗತಿ. ತಾಲೂಕಿನಲ್ಲಿಯೂ ಸಾಕಷ್ಟು ರೈತಾಪಿ ಜನರು ತಂಬಾಕನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿರುವುದು ರೈತರಿಗೆ ಆರ್ಥಿಕವಾಗಿ ಬಲವನ್ನು ತುಂಬಿದೆ. ಆದರೆ, ತಂಬಾಕು ಸಮಾಜದ ಸ್ವಾಸ್ಥೃವನ್ನು ಕೆಡಿಸುತ್ತಿದ್ದು, ದುಶ್ಚಟ ಬಿಡಬೇಕು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ತಂಬಾಕು ಸೇವನೆಯಿಂದ ಗರ್ಭ ಕೊರಳ ಕ್ಯಾನ್ಸರ್, ಬಾಬಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಸ್ಟ್ರೋಕ್, ಮಿದುಳು ಕ್ಯಾನ್ಸರ್ ಮುಂತಾದ ಬಗೆಯಲ್ಲಿ ಕಾಯಿಲೆಗಳು ಬರುತ್ತಿವೆ. ಗರ್ಭಿಣಿಯರು, ಹೆಣ್ಣು ಮಕ್ಕಳು ಸಹ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಸಮಾಜದಲ್ಲಿ ಸ್ತ್ರೀ, ಪುರುಷರಿಬ್ಬರೂ ಆಧುನಿಕತೆ ಹೆಸರಿನಲ್ಲಿ ತಂಬಾಕು ಸೇವನೆ ಮಾಡುವುದು ಜೀವಕ್ಕೆ ಕಂಟಕವಾಗಿದ್ದು, ಇನ್ನಾದರೂ ಯುವ ಸಮುದಾಯ ಜಾಗೃತರಾಗಬೇಕು ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಪರಶುರಾಮ ಶಿರೂರ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ತಂಬಾಕು ಬಳಸುವ ರಾಜ್ಯಗಳು ಅದರ ಪ್ರಮಾಣವನ್ನು ಕುರಿತು ಮಿಜೋರಾಂ ರಾಜ್ಯ ಶೇ. 72.9 ಪ್ರಮಾಣದಲ್ಲಿ ತಂಬಾಕನ್ನು ಬಳಸಿ ಮೊದಲನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್ (ಶೇ.48.5) ಹತ್ತನೇ ಸ್ಥಾನದಲ್ಲಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.27.1 ಜನರು ತಂಬಾಕನ್ನು ಬಳಸುತ್ತಿದ್ದಾರೆ ಎಂದರು.
ತಂಬಾಕು ಸೇವನೆಯ ಚಟದಿಂದ ಹೊರಬರುವಂತ ಮಾರ್ಗೋಪಾಯ ಕಂಡುಕೊಳ್ಳಬೇಕು. ಸಮಾಜದ ಆರೋಗ್ಯವನ್ನು ಕಾಪಾಡಿ ವ್ಯಸನಮುಕ್ತ ತಂಬಾಕು ರಹಿತ ನಾಡನ್ನು ಕಟ್ಟಲು ತಾವೆಲ್ಲರೂ ಕಂಕಣಬದ್ಧರಾಗಬೇಕು ಎಂದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹಿರಿಯ ತರಬೇತಿ ಅಧಿಕಾರಿ ತೌಪಿಕ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತುದಾರ ಶ್ರೀ ಯೋಗನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಕೋಶಾಧಿಕಾರಿ ಶಾಂತ ಮಲ್ಲಪ್ಪ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರಾದ ವಾಟಾಳ್ ರಮೇಶ್, ಪ್ರಕಾಶ್, ಬಾಬಹು, ಸೇವಾ ಪ್ರತಿನಿಧಿ ದಿವ್ಯ, ಬೇಬಿ ಹೆಲನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net