ಬಸವಕಲ್ಯಾಣ ತಾಲೂಕಿನ ಶರಣ ನಗರ ಗ್ರಾಮದಲ್ಲಿ ಕಲಬುರಗಿಯ ಭಾರತೀಯ ಕ್ಯಾನ್ಸರ್ ಸಂಸ್ಥೆಯಿಂದ ಬುಧವಾರ ಸಂಜೆ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಸಣಾ ಶಿಬಿರ ಹಾಗೂ ವ್ಯಸನ ಮುಕ್ತ ಜಾಗೃತಿ ಅಭಿಯಾನದಲ್ಲಿ ಶ್ರೀ ಶಿವಲಿಂಗ ಸ್ವಾಮೀಜಿ, ಗುರುರಾಜ ಕುಲಕಣಿ, ಡಾ.ಮಹೇಶ ಪಾಟೀಲ್, ಶಿವಶಂಕರ ಬಿರಾದಾರ ಇತರರಿದ್ದರು. (ಚಿತ್ರ 14ಬಿಕೆ5/ಶರಣ ನಗರ ಗ್ರಾಮದ ಮನೆಗಳಿಗೆ ಶ್ರೀ ಶಿವಲಿಂಗ ಸ್ವಾಮೀಜಿ ತೆರಳಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡು ಯುವಕರಲ್ಲಿ ಅರಿವು ಮೂಡಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಶಿವಲಿಂಗ ಸ್ವಾಮೀಜಿ ಸಲಹೆ
ಶರಣ ನಗರ ಗ್ರಾಮದಲ್ಲಿ ಉಚಿತ ತಪಾಸಣಾ ಶಿಬಿರ
ಬಸವಕಲ್ಯಾಣ: ಗ್ರಾಮೀಣ ಭಾಗದಲ್ಲಿ ಅನೇಕ ಯುವಕರು ಗುಟಕಾ, ಸರಾಯಿಯಂಥ ಚಟಗಳಿಗೆ ಆಕರ್ಷಿತರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದು, ಇದು ಸಮಾಜದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ ಚಟದಿಂದ ಮುಕ್ತರಾಗಬೇಕು ಎಂದು ಶ್ರೀ ಶಿವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಶರಣ ನಗರ ಗ್ರಾಮದಲ್ಲಿ ಕಲಬುರಗಿಯ ಭಾರತೀಯ ಕ್ಯಾನ್ಸರ್ ಸಂಸ್ಥೆಯಿಂದ ಬುಧವಾರ ಸಂಜೆ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಸಣಾ ಶಿಬಿರ ಹಾಗೂ ವ್ಯಸನ ಮುಕ್ತ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ ಪೂಜ್ಯರು ಜೋಳಿಗೆ ಹಿಡಿದು ಮನೆಮನೆಗೆ ತೆರಳಿ ಗುಟಕಾ, ಪಾನ್ ಮಸಾಲಾ, ಬೀಡಿ, ಸಿಗರೇಟು, ಇಸ್ಪೇಟ್, ಸಾರಾಯಿ ಚಟವಿದ್ದರೆ ಇಂದೇ ತಮ್ಮ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಮುಕ್ತರಾಗಿ ಆರೋಗ್ಯಪೂರ್ಣ ಸಮಾಜಕ್ಕೆ ಕೈಜೋಡಿಸಿ ಎಂದು ಕಳಕಳಿಯಿಂದ ಕೇಳಿಕೊಂಡರು.
ಸ್ವಾಮೀಜಿ ಅವರ ಮನಿಗೆ ಮನ್ನಣೆ ನೀಡಿದ 20 ಜನರು ಚಟಗಳನ್ನು ಜೋಳಿಗೆ ಹಾಕಿ ಮುಂದೆ ಚಟದಿಂದ ಮುಕ್ತರಾಗುವ ಸಂಕಲ್ಪ ಮಾಡಿದರು.
ಸಂಸ್ಥೆಯ ಕಲಬುರಗಿ ವಿಭಾಗದ ಸಂಯೋಜಕ ಗುರುರಾಜ ಕುಲಕರ್ಣಿ ಕ್ಯಾನ್ಸರ್ ಕುರಿತು ಪರದೆಯ ಮೇಲೆ ವಿಡಿಯೋ ತೋರಿಸಿ ಗುಟಕಾ, ಸರಾಯಿ ಸೇರಿ ಇತರ ಚಟಗಳಿಂದ ಆಗುವ ದುಸ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ವಾಣಿಜ್ಯ ತೆರಿಗೆಯ ಸಹಾಯಕ ಆಯುಕ್ತ ಡಾ.ಮಹೇಶ್ ಪಾಟೀಲ್ ಮಾತನಾಡಿ, ಯುವಕರು ಯವುದೇ ಕೆಟ್ಟ ಚಟಗಳಿಗೆ ಆಕರ್ಷಿತರಾಗದೇ ಆರೋಗ್ಯಕಾಪಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿವಶಂಕರ ಬಿರಾದಾರ ಮಾತನಾಡಿದರು. ಕ್ಯಾನ್ಸರ್ ಸಂಸ್ಥೆಯ ಶ್ರೀನಿಧಿ, ನಾಗರಾಜ್ ಪಾಟೀಲ್, ಗ್ರಾಮದ ಪ್ರಮುಖರಾದ ಧನರಾಜ್ ಪಾಟೀಲ್, ಅನಿಲ ಸರಡಗಿ, ಸುನೀಲ ಮನಕೆರೆ, ಉಮಾಕಾಂತ ಮನಕೆರೆ, ಬಸವರಾಜ ಪಾಟೀಲ್, ವೈಜಿನಾಥ ಸರಡಗಿ, ಅಂಬಾರಾವ ಸರಡಗಿ, ಕಾರ್ತೀಕಯ್ಯ ಸ್ವಾಮಿ ಇದ್ದರು.