

ದೊಡ್ಡಬಳ್ಳಾಪುರ:
ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಮತ್ತು ಗಾಳಿಪಟ ಕಲಾ ಸಂದಿಂದ
ಆ.2ರಂದು ಬೆಳಗ್ಗೆ 11ಕ್ಕೆ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂದ ಅಧ್ಯಕ್ಷ ಎಲ್.ಎನ್. ಶ್ರೀನಾಥ್ ತಿಳಿಸಿದರು.
ಎರಡು ವಿಭಾಗಗಳಲ್ಲಿ ಸ್ಪರ್ಧೆ
ರಾಜ್ಯದ ವಿವಿಧ ಭಾಗಗಳಿಂದ ಶಾಲಾ ಮಕ್ಕಳು ಭಾಗವಹಿಸಲಿದ್ದು, ಬಾಲಕ ಮತ್ತು ಬಾಲಕಿಯರು ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಶಾಲಾ ಗುರುತಿನ ಚೀಟಿ ಅಥವಾ ಸಮವಸ್ತ್ರದೊಂದಿಗೆ ಹಾಜರಾಗಿ, ಹೆಸರು ನೋಂದಾಯಿಸಿಕೊಳ್ಳಬಹುದು.