ಸುಮಾರು 47 ಸೆಕೆಂಡುಗಳ ಅವಧಿಯ ಈ ವಿಡಿಯೋ ಕ್ಲಿಪ್‌ನಲ್ಲಿ, ಸಮವಸ್ತ್ರಧಾರಿ ಅಧಿಕಾರಿಯೊಬ್ಬರು (ಡಾ.ರಾಮಚಂದ್ರರಾವ್ ಎನ್ನಲಾಗಿದೆ) ತಮ್ಮ ಕಚೇರಿಯ ಚೇಂಬರ್‌ನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಹಳೆಯ ಸಂಗ್ರಹಗಳ ಸರಣಿಯಂತೆ ಕಾಣುತ್ತಿದ್ದು, ಕಚೇರಿಯ ಕೆಲಸದ ವೇಳೆಯಲ್ಲೇ ಇಂತಹ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಇದು ಇಡೀ ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.