ಕಷ್ಟ ಕಂಡು ಕೆಂಗೆಡದೆ ಧೈರ್ಯದಿಂದ ನಿಲ್ಲಿ

ಚಿತ್ತಾಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶ್ರೀ ಸೋಮಶೇಖರ ಶಿವಾಚಾರ್ಯ, ಶ್ರೀ ಸಿದ್ಧಲಿಂಗ ದೇವರನ್ನು ಭಕ್ತರು ಸತ್ಕರಿಸಿ ಆಶೀರ್ವಾದ ಪಡೆದರು.
ಚಿತ್ತಾಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶ್ರೀ ಸೋಮಶೇಖರ ಶಿವಾಚಾರ್ಯ, ಶ್ರೀ ಸಿದ್ಧಲಿಂಗ ದೇವರನ್ನು ಭಕ್ತರು ಸತ್ಕರಿಸಿ ಆಶೀರ್ವಾದ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ಧಲಿಂಗ ದೇವರು ಕರೆ
  • ಚಿತ್ತಾಪುರದಲ್ಲಿ ಅಧಿಕ ಮಾಸದ ವಿಶೇಷ ಪೂಜೆ
ಚಿತ್ತಾಪುರ: ಪ್ರಪಂಚದ ಸೃಷ್ಟಿಯ ನಿಯಮವೇ ಬದಲಾವಣೆ. ಸಮಾಜದಲ್ಲಿ ಯಾವುದು ಇದ್ದ ಹಾಗೆ ಇರುವುದಿಲ್ಲ, ನಿರಂತರ ಪರಿವರ್ತನೆ ಹೊಂದುತ್ತಿರುತ್ತದೆ. ಈ ಅನಿವಾರ್ಯ ಬದಲಾವಣೆಯನ್ನು ಮನುಷ್ಯ ತಿಳಿದುಕೊಳ್ಳಬೇಕು ಎಂದು ತಾಳಿಕೋಟಿಯ ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ದೇವರು ನುಡಿದರು.
ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಧಿಕ ಮಾಸದ ವಿಶೇಷ ಪೂಜೆ, 501 ದಂಪತಿಯಿಂದ ಸಹಸ್ರ ಲಿಂಗಾರ್ಚನೆ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಬದುಕು ಸಾವು&ನೋವುಗಳ ಸಮ್ಮಿಲನ. ಸಾವು ಮತ್ತು ಬದುಕಿನ ಕಷ್ಟಗಳನ್ನು ಕಂಡು ಮನುಷ್ಯ ಕಂಗೆಡಬಾರದು. ಧೈರ್ಯದಿಂದ ನಿಲ್ಲಬೇಕು. ಬಾಳಿನ ಕಹಿ ಟನೆ, ನೋವನ್ನು ಮರೆತು, ಒಳ್ಳೆಯದನ್ನು ಮಾತ್ರ ಮನದಲ್ಲಿರಿಸಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಶಾಂತಿ ನೆಲೆಸುತ್ತದೆ ಎಂದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿದರು.
ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯ, ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯ, ಪಾಳಾ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ, ಅಳ್ಳೋಳ್ಳಿಯ ಶ್ರೀ ಸಂಗಮನಾಥ ದೇವರು, ದಂಡೋತಿಯ ಬಾಲಯೋಗಿನಿ ಜಯಶ್ರೀ ಮಾತಾ, ದಿಗ್ಗಾಂವ್​ದ ಶ್ರೀ ಮಲ್ಲಯ್ಯಸ್ವಾಮಿ, ಮಾಲಗತ್ತಿಯ ಶ್ರೀ ಡಾ.ಚನ್ನಬಸವ ಶರಣರು ಸಾನ್ನಿಧ್ಯ, ಕರಬಸಯ್ಯ ಶಾಸಿ ನೇತೃತ್ವ ವಹಿಸಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಪ್ರಮುಖರಾದ ವಿಜಯಕುಮಾರ ದೇಶಮುಖ, ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಕರಣಯ್ಯ ಶಾಸಿ, ಸೋಮನಾಥ ಶಾಸಿ, ಬಸವರಾಜ ಬೊಮ್ಮನಳ್ಳಿ, ನಾಗರಾಜ ರೇಷ್ಮಿ, ರಮೇಶ ಬೊಮ್ಮನಳ್ಳಿ, ದೇವಿಂದ್ರಪ್ಪ ಸಜ್ಜನಶೆಟ್ಟಿ, ದಶರಥ ದೊಡ್ಡಮನಿ, ಸುರೇಶ ಅಲ್ಲೂರ, ರಾಜಶೇಖರ ಸಿಂಪಿ, ಮಾರುತಿರಾವ ಪೂಜಾರಿ, ಬಸವರಾಜ ಮಾಡಗಿ, ಅಂಬರೀಷ್​ ಸುಲೇಗಾಂವ್​, ಶಿವಕುಮಾರ ಹಿರೇಮಠ, ವೃಷಬೇಂದ್ರ ಶಾಸಿ, ತೋಟಯ್ಯ ಶಾಸಿ, ವಿನೋದ್​ ಶಾಸಿ ಇತರರಿದ್ದರು.
501 ದಂಪತಿಯ ಸಹಸ್ರ ಲಿಂಗಾರ್ಚನೆ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವ, ಹೊನ್ನಕಿರಣಗಿ ಮಠದ ಶಾಲಾ ವಿದ್ಯಾರ್ಥಿಗಳ "ಕಾಶಿ ಗಂಗಾ ಆರತಿ' ಭಕ್ತರ ಕಣ್ಮನ ಸೆಳೆಯಿತು. ವೀರೇಶ ಶಾಸಿ ನಿರೂಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net