ಫಲಿತಾಂಶವನ್ನು ಉತ್ತಮ ಪಡಿಸಲು ಆಯ್ದ ಪ್ರೌಡ ಶಾಲೆಗಳ ಓದಿನ ಪೂರಕ ವಾತಾವರಣ ನಿರ್ಮಿಸಲು 2500ಕ್ಕೂ ಅಧಿಕ ಓದಿನ ಮನೆ ಪ್ರಾರಂಭಿಸಲಾಗಿದೆ. ಹಾಗೂ ಡಿಡಿಪಿಐ ಸೇರಿ ಅಧಿಕಾರಿಗಳಿಂದ ಮನೆ ಮನೆ ಭೇಟಿ ಕಾರ್ಯಕ್ರಮ,ಶಾಲಾ ದತ್ತು ಯೋಜನೆ, ವಿಷಯವಾರು ಪರಿಣಿತ ಶಿಕ್ಷಕರ ಮೌಲ್ಯಮಾಪನ, ಕಾರ್ಯಾಗಾರ, ವಿಶೇಷ ಭೋದನೆ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲಾಗಿದೆ.ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು.