ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 1,03,119 ಮಂದಿಯಲ್ಲಿ 56,912 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಪ್ರಸಕ್ತ ಸಾಲಿನ 49,351 ಮಂದಿಯಲ್ಲಿ 31,080 (ಶೇ.62.98), 18,471 ಖಾಸಗಿ ವಿದ್ಯಾರ್ಥಿಗಳಲ್ಲಿ 3,453 (ಶೇ.18.69), 32,740 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 21,671 (ಶೇ.66.19), 2,557 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 708 (ಶೇ.27.69) ಉತ್ತೀರ್ಣರಾಗಿದ್ದಾರೆ. ಪ್ರಸಕ್ತ ಸಾಲಿನ (ಪ್ರೆಷರ್ಷ್) ಪರೀಕ್ಷೆ-1 ಮತ್ತು2 ಸೇರಿ ಒಟ್ಟು ಶೇ.98.08 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆ ಹೊರಡಿಸಿದೆ.