ಶ್ರೀತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ Brahmarathotsava

ಬಂಗಾರಪೇಟೆ ತಾಲೂಕು Brahmarathotsava ಗುಲ್ಲಹಳ್ಳಿ ಹಾಗೂ ಗೊಡಗಮಂದೆ ಗ್ರಾಮದ ಮಧ್ಯದಲ್ಲಿ ನೆಲೆಸಿರುವ ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಿತು.
ಬಂಗಾರಪೇಟೆ ತಾಲೂಕು Brahmarathotsava ಗುಲ್ಲಹಳ್ಳಿ ಹಾಗೂ ಗೊಡಗಮಂದೆ ಗ್ರಾಮದ ಮಧ್ಯದಲ್ಲಿ ನೆಲೆಸಿರುವ ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಿತು.
Published on
ಬೂದಿಕೋಟೆ: ಬಂಗಾರಪೇಟೆ ತಾಲೂಕು ಗುಲ್ಲಹಳ್ಳಿ ಹಾಗೂ ಗೊಡಗಮಂದೆ ಗ್ರಾಮದ ಮಧ್ಯದಲ್ಲಿ Brahmarathotsava ನೆಲೆಸಿರುವ ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಮತ್ತು ಕಲ್ಯಾಣ ಮಹೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.
ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸಂಪ್ರದಾಯಬದ್ಧ ವಿಧಿ ವಿಧಾನಗಳೊಂದಿಗೆ ಬ್ರಹ್ಮರಥೋತ್ಸವ ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಗೋವಿಂದಾ, ಗೋವಿಂದಾ ಎಂಬ ಜಯಘೋಷಗಳೊಂದಿಗೆ ರಥ ಎಳೆದು ಭಕ್ತಿ ಸಮರ್ಪಿಸಿದರು.
ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಬೂದಿಕೋಟೆ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ವಿ.ನಾಗರಾಜ್​, ಎ.ಬಾಬು, ನಗರ ಬ್ಲಾಕ್​ ಅಧ್ಯಕ್ಷ ಚಂದ್ರು, ಡಿಸಿಸಿ ಬ್ಯಾಂಕ್​ ವ್ಯವಸ್ಥಾಪಕ ಚಂದ್ರಶೇಖರ್​, ಕೊಂಡಪ್ಪ ನಾಯಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್​ ಕೃಷ್ಣಪ್ಪ, ಶ್ರೀರಂಗ, ಲಕ್ಷ$್ಮಪ್ಪ, ನಿವೃತ್ತ ಯೋಧ ವೆಂಕಟಾಚಲಪತಿ, ಬ್ಯಾಂಕ್​ ಶ್ರೀನಿವಾಸ್​ ಆಚಾರಿ, ಮುತನೂರು ಮಲ್ಲೇಶ್​ ಗೌಡ, ಗುಡಗಮಂದೆ ಶಿವು, ಎಂ.ಹೊಸಹಳ್ಳಿ ಮೊಲೊಜಿ ರಾವ್​, ವೆಂಕೋಬರಾವ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net