ನಗರದ ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆ; ರಾಯರ ನಾಮಸ್ಮರಣೆ

ಬನಶಂಕರಿ ರಾಯರ ಮಠದಲ್ಲಿ  ದೇವಗಿರಿ ಶ್ರೀಗುರುಸೇವಾ ಸಮಿತಿಯ ಆಶ್ರಯದಲಿ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬನಶಂಕರಿ ರಾಯರ ಮಠದಲ್ಲಿ ದೇವಗಿರಿ ಶ್ರೀಗುರುಸೇವಾ ಸಮಿತಿಯ ಆಶ್ರಯದಲಿ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆ
  • ಕಲಿಯುಗದ ಕಾಮಧೇನು ಗುರು ರಾಯರ ನಾಮಸ್ಮರಣೆ
  • 355ನೇ ಆರಾಧನಾ ಮಹೋತ್ಸವಕ್ಕೆ ಸಡಗರ, ಸಂಭ್ರಮ

ಬೆಂಗಳೂರು: ಕಲಿಯುಗದಕಾಮಧೇನು,ಕಲ್ಪವೃಕ್ಷಎಂದೇ ಕರೆಯಲ್ಪಡುವ ಗುರುಸಾರ್ವಭೌಮಶ್ರೀರಾಘವೇಂದ್ರ ಸ್ವಾಮಿಗಳುಬೃಂದಾವನ ಪ್ರವೇಶಿಸಿದ ಪವಿತ್ರದಿನದ ಹಿನ್ನೆಲೆಯಲ್ಲಿ ಮೂರುದಿನಗಳ ಆರಾಧನೆ ಮಹೋತ್ಸವ ಕಾರ್ಯಕ್ರಮಹಮ್ಮಿಕೊಳ್ಳಲಾಗಿದ್ದು,ರಾಯರ ಮಠಗಳಲ್ಲಿವಿಶೇಷ ಅಭಿಷೇಕ,ಅರ್ಚನೆಗಳುನಡೆದವು.

ಮಂತ್ರಾಲಯದಗುರುರಾಯರಿಗೆ ದೇಶಾದ್ಯಂತಕೋಟ್ಯಾಂತರ ಭಕ್ತರಿದ್ದು,ಭಕ್ತರು ರಾಯರಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದಆಚರಿಸುತ್ತಾರೆ.ಅಂತೆಯೇ ಬೆಂಗಳೂರಿನವಿವಿಧ ಬಡಾವಣೆಗಳಲ್ಲಿರುವ ರಾಯರಮಠಗಳಲ್ಲಿ 355ನೇಆರಾಧನೆ ಅಂಗವಾಗಿ ಶನಿವಾರಬೆಳಗ್ಗಿನಿಂದಲೇ ವಿಶೇಷ ಅಭಿಷೇಕ,ಪೂಜೆ,ಪ್ರಸಾದ ವಿತರಣೆಯನ್ನುಹಮ್ಮಿಕೊಳ್ಳಲಾಗಿತ್ತು.

ಜಯನಗರದ5ನೇಬಡಾವಣೆಯಲ್ಲಿರುವ ನಂಜನಗೂಡುಶ್ರೀ ರಾಘವೇಂದ್ರ ಮಠದಲ್ಲಿಪೂರ್ವಾರಾಧನೆ ನಿಮಿತ್ತ ರಾಯರ ಬೃಂದಾವನಕ್ಕೆ 108ಲೀಟರ್ ಹಾಲಿಅಭಿಷೇಕ, ಲಪಂಚಾಮೃತಅಭಿಷೇಕ,ಸ್ವರ್ಣಸಿಂಹಾಸನಕ್ಕೆಪುಷ್ಪದ ಅಲಂಕಾರ ಹಾಗೂ ಗುರುರಾಯರಪಾದಪೂಜೆ ನೆರವೇರಿಸಲಾಯಿತು.

ಮಠದವ್ಯವಸ್ಥಾಪಕ ಆರ್.ಕೆ.ವಾದಿಂದ್ರಆಚಾರ್ಯರ ನೇತೃತ್ವದಲ್ಲಿ ಅರ್ಚಕರಾದಗೊಗ್ಗಿ ರಾಮಚಂದ್ರ ಆಚಾರ್ ಮತ್ತುಕೃಷ್ಣಾಚಾರ್ಯರು ಪೂಜಾ ವಿಧಿ-ವಿಧಾನಗಳನ್ನುನೆರವೇರಿಸಿದರು.ಈ ಸಂದರ್ಭದಲ್ಲಿಶಶಿಕುಮಾರ್ ಮತ್ತು ತಂಡದವರಿಂದಶ್ರೀಗುರು ರಾಘವೇಂದ್ರ ಸ್ತೋತ್ರಅಷ್ಟೋತ್ತರ ಪಾರಾಯಣ ನೆರವೇರಿತು.ಸೇವಾಕರ್ತರುಗುರು ರಾಯರ ಶೇಷ ವಸ್ತ್ರ,ಪರಿಮಳ ಪ್ರಸಾದ,ಮಹಾಪ್ರಸಾದ ಫಲಮಂತ್ರಾಕ್ಷತೆಯೊಂದಿಗೆ ಅನ್ನಸಂತರ್ಪಣೆಯ ಪ್ರಸಾದವನ್ನು ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆಪಾತ್ರರಾದರು.ವಿಶೇಷವಾಗಿರಾಯರ ಭಕ್ತರಾದ ಇನ್‌ೆಸಿಸ್ಮುಖ್ಯಸ್ಥೆ ಹಾಗೂ ರಾಜ್ಯಸಭಾಸದಸ್ಯೆ ಸುಧಾಮೂರ್ತಿ ರಾಯರ ದರ್ಶನಪಡೆದು ವಿವಿಧ ಸೇವೆಯಲ್ಲಿಪಾಲ್ಗೊಂಡರು.

ಬನಶಂಕರಿ2ನೇಹಂತದ 24ನೇಮುಖ್ಯರಸ್ತೆಯಲ್ಲಿರುವ ರಾಯರಮಠದಲ್ಲಿ ದೇವಗಿರಿ ಶ್ರೀಗುರುಸೇವಾಸಮಿತಿಯ ಆಶ್ರಯದಲಿ 355ನೇಆರಾಧನಾ ಮಹೋತ್ಸವದ ಪೂರ್ವಾರಾಧನೆಯನ್ನುಶನಿವಾರ ಭಕ್ತಿ,ಶ್ರದ್ಧೆ ಮತ್ತುಸಂಭ್ರಮದಿಂದ ಆಚರಿಸಲಾಯಿತು.

ಗುರುರಾಯರಬೃಂದಾವನ ಹಾಗೂ ಮಠದ ಆವರಣವನ್ನುವಿಶೇಷವಾಗಿ ವಿವಿಧ ಬಗೆಯ ಹೂವುಗಳಿಂದಅಲಂಕರಿಸಲಾಗಿತ್ತು.ದಿನಪೂರ್ತಿ 10ಸಾವಿರಕ್ಕೂಅಧಿಕ ಭಕ್ತರು ಮಠಕ್ಕೆ ಆಗಮಿಸಿರಾಯರ ದರ್ಶನ ಪಡೆದು ತೀರ್ಥ ಹಾಗೂಮಹಾಪ್ರಸಾದ ಸ್ವೀಕರಿಸಿದರು.

ಆರಾಧನಾಮಹೋತ್ಸವದ ಅಂಗವಾಗಿ ಮೂರು ದಿನಗಳಕಾಲ ವಿವಿಧ ಧಾರ್ಮಿಕ ಹಾಗೂಸಾಂಸ್ಕೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿದೆ.ಮಧ್ಯಾರಾಧನೆಅಂಗವಾಗಿ ಭಾನುವಾರ (.30)ಬೆಳಗ್ಗೆ ಫಲಪಂಚಾಮೃತ ಅಭಿಷೇಕ,ಸಾಮೂಹಿಕ ಕನಕಾಭಿಷೇಕಹಾಗೂ ಸುವರ್ಣ ಪಾದುಕೆ ಸಹಿತ ರಜತರಥೋತ್ಸವ ನಡೆಯಲಿದೆ.ವಿವಿಧ ಕಲಾತಂಡಗಳಿಂದಹರಿಕಥೆ, ದಾಸವಾಣಿಹಾಗೂ ಕೊಳಲು ವಾದನ ಸೇರಿದಂತೆಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕಕಾರ್ಯಕ್ರಮಗಳು ನಡೆಯಲಿವೆ ಎಂದುಕಾರ್ಯದರ್ಶಿ ಸಿ.ವಿ.ದ್ವಾರಕನಾಥತಿಳಿಸಿದ್ದಾರೆ.

ಶ್ರೀನಗರದಲ್ಲಿರುವರಾಯರ ಮಠದಲ್ಲಿ 355ನೇಆರಾಧನೆ ಹಿನ್ನೆಲೆಯಲ್ಲಿ ವಿವಿಧಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಕಲಿಯುಗ ಕಲ್ಪತರುಎಂದೇ ಭಕ್ತ ಮಾನಸರಿಂದ ಕರೆಸಿಕೊಳ್ಳುವ, ರಾಯರಿಗೆಭಕ್ತರು ಅವಿಚ್ಚಿನ್ನ ಭಕ್ತಿಭಾವದಿಂದ ಅರ್ಚಿಸಿದರು. ರಾಯರು ಸಜೀವಬೃಂದಾವನ ಪ್ರವೇಶ ಮಾಡಿದ ಸುದಿನದಂದು ಮಧ್ಯಾರಾಧನೆಯ ಆಚರಿಸಲಾಗುತ್ತದೆ.ಬೆಳಗ್ಗೆ 7ಕ್ಕೆಫಲಮಂತ್ರಾಕ್ಷತೆ,ಕನಕಾಭಿಷೇಕ,ಭಜನೆ ಹಾಗೂ ವಿಶೇಷಪ್ರವಚನ ನಡೆಯಲಿದೆ.ಸಂಜೆ 6.30ಕ್ಕೆವಿದ್ವಾನ್ ನೆರಣಿಕೆ ಜೋಯಿಸ್ಶ್ರೀಕುಮಾರ್ ಭಟ್ ತಂಡದವರಿಂದದಾಸವಾಣಿ ಕಾರ್ಯಕ್ರಮ ನಡೆಯಲಿದೆ.ಸೋಮವಾರ ಉತ್ತರಾಧನೆನಡೆಯಲಿದ್ದು,ಎಲ್ಲ ಕಾರ್ಯಕ್ರಮಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರುಭಾಗವಹಿಸುವಂತೆ ಸಮಿತಿಯವರುಕೋರಿದ್ದಾರೆ.

ಶ್ರೀನಿವಾಸನಗರದಸೌಳೆ ಶ್ರೀರಾಘವೇಂದ್ರ ಮಠದಲ್ಲಿರಾಯರ ಆರಾಧನೆ ಹಿನ್ನಲೆಯಲ್ಲಿಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ.ಶನಿವಾರ ಪೂರ್ವಾರಾಧನೆಅಂಗವಾಗಿ ಶ್ರೀವಿದ್ಯೇಂದ್ರತೀರ್ಥಶ್ರೀಪಾದರಿಂದ ವಿಶೇಷ ಪೂಜೆನೆರವೇರಿತು.ಭಾನುವಾರ ಮಧ್ಯಾರಾಧನೆನಿಮಿತ್ತ ಶ್ರೀ ಸುವಿದೇಂದ್ರತೀರ್ಥಶ್ರೀಪಾದರಿಂದ ಅನುಗ್ರಹ ಸಂದೇಶಹಾಗೂ ವಿವಿಧ ಕಾರ್ಯಕ್ರಮಗಳುನಡೆಯಲಿವೆ.ಸೋಮವಾರ ಉತ್ತರಾಧನೆನಡೆಯಲಿದ್ದು,ಪ್ರತಿದಿನ ಸಂಜೆವಿದ್ವಾನ್ ಲಕ್ಷ್ಮೀಕಾಂತಾಚಾರ್ಯರಿಂದಶ್ರೀರಾಘವೇಂದ್ರ ವಿಜಯ ಪ್ರವಚನಹಮ್ಮಿಕೊಳ್ಳಾಗಿದೆ.

ಇನ್ನುಳಿದಂತೆಶೇಷಾದ್ರಿಪುರದ ರಾಘವೇಂದ್ರ ಮಠ,ಜಾಲಹಳ್ಳಿಶಾರದಾನಗರದ ರಾಘವೇಂದ್ರ ಮಠ,ಮಲ್ಲೇಶ್ವರದಲಿಮಾರು ಮಠ,ಬಸವನಗುಡಿಶ್ರೀಪುತ್ತಿಗೆ ಮಠ ಮತ್ತಿತರೆಡೆರಾಘವೇಂದ್ರ ಸ್ವಾಮಿಗಳ ಆರಾಧನೆಹಿನ್ನೆಲೆಯಲ್ಲಿ ವಿಶೇಷ ಪೂಜೆನಡೆಯಿತು.

ಜಯನಗರ5ನೇಬಡಾವಣೆಯಲ್ಲಿರುವ ಶ್ರೀರಾಘವೇಂದ್ರಮಠದಲ್ಲಿ ಪೂರ್ವಾರಾಧನೆ ನಿಮಿತ್ತರಾಯರ ಬೃಂದಾವನಕ್ಕೆ ಲಪಂಚಾಮೃತಅಭಿಷೇಕ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net