ವಿದ್ಯಾರ್ಥಿಗಳ ದೈಹಿಕ ಚಟುವಟಿಕೆಗೆ ಕ್ರೀಡೆ ಪೂರಕ

ರೇವತಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಚಡಚಣ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಗಣ್ಯರು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು. ಬಿ.ಎಸ್. ಮಜ್ಜಗಿ, ರ್ಇಾನ್ ಮಕನದಾರ, ಬಿ.ಎಂ. ಬಿರಾದಾರ ಮತ್ತಿತರರಿದ್ದರು.
ರೇವತಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಚಡಚಣ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಗಣ್ಯರು ಕ್ರೀಡಾಜ್ಯೋತಿಯನ್ನು ಸ್ವಾಗತಿಸಿದರು. ಬಿ.ಎಸ್. ಮಜ್ಜಗಿ, ರ್ಇಾನ್ ಮಕನದಾರ, ಬಿ.ಎಂ. ಬಿರಾದಾರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಗೇಂದ್ರಪ್ಪ ಕಿವಿಮಾತು
  • ಶಾಲಾ ಕ್ರೀಡಾಕೂಟಕ್ಕೆ ಚಾಲನೆ
ರೇವತಗಾಂವ : ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಆ ಉದ್ದೇಶದಿಂದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಗೇಂದ್ರಪ್ಪ ಕಿವಿಮಾತು ಹೇಳಿದರು.
ಶನಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಚಡಚಣ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ವಿದ್ಯಾರ್ಥಿಗಳು ಶಾಲಾ ಪಠ್ಯದ ಜೊತೆಗೆ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಕಲಿಕೆಗೆ ಸಹಕಾರಿಯಾಗುತ್ತದೆ. ಜೊತೆಗೆ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.
ಚಡಚಣ ತಾಲೂಕು ಶಿಕ್ಷಕರ ಸೊಸೈಟಿ ಅಧ್ಯಕ್ಷ ಜಿ.ಎಸ್. ಜೇವೂರ ಮಾತನಾಡಿದರು
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಮಜ್ಜಗಿ, ಚಡಚಣ ತಾಲೂಕಿನ ಶಿಕ್ಷಕರ ಸೊಸೈಟಿ ಉಪಾಧ್ಯಕ್ಷ ರ್ಇಾನ್ ಮಕನದಾರ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಂ. ಬಿರಾದಾರ, ಪಿಡಿಒ ದೇವೇಂದ್ರ ವಾಗ್ಮೋಡೆ, ಮಾಜಿ ಗ್ರಾ.ಪಂ. ಸದಸ್ಯ ಮಹಾದೇವ ಅಂಕಲಗಿ, ಜಿಲ್ಲಾ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಖಚಾಂಜಿ ಸುನೀಲ ಯಳಮೇಲಿ, ಸಿಆರ್‌ಪಿ ಟಿ.ಎನ್. ತಳವಾರ, ಮುಖ್ಯ ಶಿಕ್ಷಕ ಆರ್.ಎನ್. ಹತ್ತಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಬಿಜ್ಜರಗಿ, ಉಪಾಧ್ಯಕ್ಷ ಹಣಮಂತ ಹಕ್ಕೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net