ಭಾವನೆ, ಚಿಂತನೆಗಳ ಮಿಲನಕ್ಕೆ ಕ್ರೀಡೆ ಪೂರಕ Athletic event

ಕಲ್ಪತರು Athletic event ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 27ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್​ ಕ್ರೀಡಾಕೂಟ
ಕಲ್ಪತರು Athletic event ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 27ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್​ ಕ್ರೀಡಾಕೂಟ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ
  • ರಾಜ್ಯಮಟ್ಟದ ಅಥ್ಲೆಟಿಕ್​ ಕ್ರೀಡೆಗೆ ಚಾಲನೆ
ತಿಪಟೂರು:  ಕ್ರೀಡೆಯಲ್ಲಿ ಸೋಲು, ಗೆಲುವಿಗಿಂತ ರಾಜ್ಯದ ಕ್ರೀಡಾಪಟುಗಳು, Athletic event ಕ್ರೀಡಾ ತರಬೇತುದಾರರು, ಶಿಕ್ಷಕರು ಒಂದೆಡೆ ಸೇರಿದಾಗ ಅವರಲ್ಲಿರುವ ಭಾವನೆಗಳು ಮತ್ತು ಚಿಂತನೆಗಳ ಮಿಲಿನವಾಗುತ್ತದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಕಲ್ಪತರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ 27ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್​ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, 1961ರಲ್ಲಿ ಪ್ರಾರಂಭವಾದ ಕಲ್ಪತರು ಶಿಕ್ಷಣ ಸಂಸ್ಥೆ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಬದುಕು ರೂಪಿಸಿಕೊಟ್ಟಿದೆ. ಈಗ ವಿಟಿಯು ಸಹಯೋಗದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸುವ ಮೂಲಕ ದೊಡ್ಡ ಸಂದೇಶ ನೀಡಿದೆ ಎಂದರು.
2016-&17ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 321ಕ್ಕೂ ಹೆಚ್ಚು ಮೂಲ ಸೌಕರ್ಯಗಳನ್ನು ಕಲ್ಪಿಸಿ ಪಂಡಿತ್​ ದೀನದಯಾಳ್​ ಅವರ ಹೆಸರಿಲ್ಲಿ ದೇಶಾದ್ಯಂತ 1445 ಖೇಲೋ ಇಂಡಿಯಾ ರೂಪಿಸಿ ಕ್ರೀಡಾಪಟುಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದಾರೆ. ಬೆಳಗಾವಿಯ ವಿಟಿಯು ಮತ್ತು ಕಲ್ಪತರು ವಿದ್ಯಾಸಂಸ್ಥೆ 27ನೇ ರಾಜ್ಯಮಟ್ಟದ ಅಥ್ಲೆಟಿಕ್​ ಕ್ರೀಡಾ ಕೂಟ ಆಯೋಜಿಸುವ ಮೂಲಕ ಕ್ರೀಡಾ ಜಗತ್ತಿನ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದರು.
1800ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗಿ:
ರಾಜ್ಯದ 142 ತಾಂತ್ರಿಕ ಮಹಾವಿದ್ಯಾಲಯಗಳ ಸುಮಾರು 1800ಕ್ಕೂ ಹೆಚ್ಚು ಕ್ರೀಡಾಪಟುಗಳು, 250ಕ್ಕೂ ಹೆಚ್ಚು ದೈಹಿಕ ಶಿಕ್ಷಕರು ಮತ್ತು  ತರಬೇತುದಾರರು 3 ದಿನಕಾಲ ನಡೆಯುವ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ. 
ದೇಶ ಇದ್ದರೆ ನಾವು:
ವಿಕಸಿತ ಭಾರತ 2047ಕ್ಕೆ ದೇಶದ ಎಲ್ಲ ವರ್ಗವನ್ನೂ ಕಾಡುತ್ತಿರುವ ಅಡೆ-ತಡೆಗಳನ್ನು ನಿವಾರಿಸಲು ಪ್ರಧಾನಿ ಮೋದಿ ಕಟಿಬದ್ಧರಾಗಿದ್ದಾರೆ. 2013ರಲ್ಲಿ 3 ಕೋಟಿ ಕುಟುಂಬಗಳಿಗೆ ಸೀಮಿತವಾಗಿದ್ದ ಶುದ್ಧ ಕುಡಿಯುವ ನೀರನ್ನು ಇಂದು 16 ಕೋಟಿ ಕುಟುಂಬಕ್ಕೆ ವಿಸ್ತರಿಸಲಾಗಿದೆ. ತಾಲೂಕಿನ ಅಭಿವೃದ್ಧಿಗೆ ಶಾಸಕ ಕೆ.ಷಡಕ್ಷರಿ ಶ್ರಮಿಸುತ್ತಿದ್ದಾರೆ. ಆದರೂ ಎಲ್ಲೋ ಒಂದು ಕಡೆ ಕಾಡುತ್ತಿರುವ ವ್ಯವಸ್ಥೆಯ ಕೊರತೆ ನಿವಾರಿಸಲು ಮಧುಗಿರಿ ಅಥವಾ ತಿಪಟೂರನ್ನು ಜಿಲ್ಲಾ ಕೇಂದ್ರ ಮಾಡುವುದು ಅನಿವಾರ್ಯ ಎಂದ ಸೋಮಣ್ಣ, ಮುಂದಿನ 10&-15 ದಿನಗಳಲ್ಲಿ ಅರಸೀಕೆರೆಯಿಂದ ಬೆಂಗಳೂರುವರೆಗೂ ಮೆಮೋ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಸೋಮಣ್ಣ ತಿಳಿಸಿದರು. 
ಕ್ರೀಡೆ ಉಲ್ಲಾಸ, ಆರೋಗ್ಯ ಮತ್ತು ಸ್ನೇಹಕ್ಕೆ ಪೂರಕವಾಗಿದೆ. ಮುಂದಿನ ವರ್ಷ ಸಂಸದರ ಕ್ರೀಡಾಕೂಟವನ್ನು ತಿಪಟೂರಿನಲ್ಲಿ ಆಯೋಜಿಸಲಾಗುವುದು. ಇದರಲ್ಲಿ ರೈಲ್ವೆ ಇಲಾಖೆಯ ಕ್ರೀಡಾಪಟುಗಳೂ ಭಾಗಿಯಾಗಲಿದ್ದಾರೆ. 
> ವಿ.ಸೋಮಣ್ಣ, ಕೇಂದ್ರ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net