ಕರಡು ಮತದಾರರ ಪಟ್ಟಿ ಕನ್ನಡ ಅಥವಾ ಇಂಗ್ಲಿಷ್ ಜತೆ ಪ್ರದೇಶವಾರು ಭಾಷೆ ಬಳಕೆ ಮಾಡಲಾಗುತ್ತದೆ. ಮರಾಠಿ, ತಮಿಳು, ತೆಲುಗು, ಹಿಂದಿಯೂ ಬಳಕೆಯಲ್ಲಿದೆ. ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಿದ್ದು, 24ರಿಂದ ನೋಟಿಸ್ ವಿತರಣೆ ಆರಂಭವಾಗಲಿದೆ. ದಾಖಲೆ ಸಲ್ಲಿಕೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 22ರ ವರೆಗೆ ಅವಕಾಶವಿದೆ. ಫಾರಂ 6 ಸಲ್ಲಿಸಿರುವವರ ದಾಖಲೆ ಪರಿಶೀಲನೆ ಕೂಡ ಆ.24ರಿಂದ ಆರಂಭವಾಗಲಿದೆ. ಅವರ ಹೆಸರು ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ವಿವರಿಒಸಲಾಗಿದೆ.