ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ

ಆಷಾಢ ಮಾಸದ ಪ್ರಯುಕ್ತ  ಕೊಪ್ಪದಲ್ಲಿ ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಬೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ರುದ್ರೇಶ್, ಸೋಮಶೇಖರ್ ಇತರರಿದ್ದರು.
ಆಷಾಢ ಮಾಸದ ಪ್ರಯುಕ್ತ ಕೊಪ್ಪದಲ್ಲಿ ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಬೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ರುದ್ರೇಶ್, ಸೋಮಶೇಖರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪ ಬಿ.ಎಂ.ರಸ್ತೆ ಸಮೀಪದಲ್ಲಿರುವ ಕಾವೇರಿ ಮಾತೆ ಪ್ರತಿಮೆ
  • 161ನೇ ಆಷಾಢ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ

ಬೈಲುಕುಪ್ಪೆ:

ಸಮೀಪದ ಕೊಪ್ಪ ಬಿ.ಎಂ.ರಸ್ತೆ ಸಮೀಪದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ 161ನೇ ಆಷಾಢ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

ಅರ್ಚಕ ಪ್ರಸನ್ನ ಭಟ್ಟ ಅವರು ಕಾವೇರಿ ನದಿಯಿಂದ ನೀರನ್ನು ತಂದು ಪ್ರತಿಮೆಯನ್ನು ಸ್ವಚ್ಛಗೊಳಿಸಿ ವಿವಿಧ ಪೂಜಾ ಕಾರ್ಯ ಹಾಗೂ ನೈವೇದ್ಯ ಮಾಡಿದರು. ನಂತರ ಹೊಸ ಸೀರೆ, ಕುಪ್ಪಸ, ಒಡವೆಗಳನ್ನು ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಮಂಗಳವಾದ್ಯೊಂದಿಗೆ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಪೂಜಾ ಕಾರ್ಯದ ನೇತೃತ್ವ ವಹಿಸಿದ್ದ ಬಾರವಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬೇಭಿಂದ್ರ ಪ್ರಸಾದ್ ಮಾತನಾಡಿ, ಕಾವೇರಿ ನದಿಗೆ ಯಾರೂ ತ್ಯಾಜ್ಯ ಹಾಕಬಾರದು. ಅಲ್ಲದೆ ಮಳೆ-ಬೆಳೆ ಸಮೃದ್ಧವಾಗಿ ಆಗಲಿ ಎಂದು ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಸಂಘದ ಪದಾಧಿಕಾರಿಗಳಾದ ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಅವತ್ತಿ ಸೋಮಶೇಖರ್, ಮಂಜು, ಚಂದ್ರು, ರುದ್ರೇಶ್, ತಿಲಕ್ ಪೂಜಾರಿ, ಕಾವೇರಿ ಮಣಿ, ವೆಂಕಟಪ್ಪ, ರವಿ, ದೇವರಾಜ್, ಶಂಕರ್, ಸೇವಾರ್ಥದಾರರಾದ ವಿರಾಜಪೇಟೆಯ ಜಾನಕಿ ಪಿ.ಕೆ.ದೇವಯ್ಯ ಹಾಗೂ ಮುತ್ತಿನ ಮುಳ್ಳುಸೋಗೆಯ ಇಂದ್ರಮ್ಮ ಕುಟುಂಬಸ್ಥರ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net