ಮಾಗಡಿ ತಾಲೂಕಿನ ಅಜ್ಜನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿದ್ದದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿರುವ ಕಾಡು ಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
Published on:
Copied
Follow Us
ಮಾಗಡಿ: ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮಸ್ಥರು ಕಾಡು ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನ ಅಜ್ಜನಹಳ್ಳಿ ಗ್ರಾಪಂ ವ್ಯಾಪ್ತಿ ಸಿದ್ದದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿರುವ ಕಾಡು ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಸೇರಿದ್ದ ನೂರಾರು ಗ್ರಾಮಸ್ಥರು, ಸಂಪ್ರದಾಯದಂತೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ವಿಶೇಷ ಅಲಂಕಾರ ಪೂಜೆ ಸಲ್ಲಿಸಿ, ಕೃಷಿ ಚಟುವಟಿಕೆ ಸುಸೂತ್ರವಾಗಿ ನಡೆದು ಕೃಷಿಕರು, ಜಾನುವಾರು ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ಎದುರಾಗದಿರಲಿ ಎಂದು ದೇವರಲ್ಲಿ ಬೇಡಿಕೊಂಡರು.
ಪೂಜಾ ಕೈಂಕರ್ಯ ನಂತರ ನೂರಾರು ಭಕ್ತರಿಗೆ ಹೋಳಿಗೆ ಊಟ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮದ ಹಿರಿಯ ಚಿಕ್ಕಣ್ಣ ಮಾತನಾಡಿ, ಮುಂಗಾರು ವಿಳಂಬದಿಂದಾಗಿ ತಾಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದೆ. ಕಳೆದ ವರ್ಷ ಜೂನ್ ವೇಳೆಗೆ ಬಿತ್ತನೆ ಕಾರ್ಯ ಪೂರ್ಣಗೊಂಡು ಪೈರು ನಳನಳಿಸುತ್ತಿದ್ದವು.
ಈ ಬಾರಿ ಮಳೆ ಇಲ್ಲದೆ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿವೆ. ಮಳೆ ಕೊರತೆಯಿಂದ ಜೀವಸಂಕುಲ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ. ಕೃಷಿ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಪೂಜೆ ಸಲ್ಲಿದ್ದೇವೆ ಎಂದರು.
ಗ್ರಾಮದ ಮುಖಂಡ ಗಿರೀಶ್, ಶಿವಕುಮಾರ್, ಬಸವರಾಜು, ಅಂಬರೀಶ್, ರುದ್ರೇಶ್, ಜಗದೀಶ್, ನಾಗೇಶ್, ಬಸವರಾಜು, ಅರ್ಚಕ ಗಿರೀಶ್, ಚಂದ್ರಶೇಖರ್, ಮಹೇಶ್ ಇದ್ದರು.