ಅಧಿಕ ಮಾಸದ ವಿಶೇಷ ಪೂಜೆ 24ಕ್ಕೆ

,
,
Published on

ಪ್ರಮುಖ ಮುಖ್ಯಾಂಶಗಳು

  • ವೇದಮೂರ್ತಿ ಕರಬಸಯ್ಯ ಶಾಸ್ತ್ರಿ ಮಾಹಿತಿ
  • 501 ದಂಪತಿಯಿಂದ ಸಹಸ್ರ ಲಿಂಗಾರ್ಚನೆ, ಗಂಗಾರತಿ
ಚಿತ್ತಾಪುರ: ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಮೇ 24ರಂದು ಅಧಿಕ ಮಾಸ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಮೂರ್ತಿ ಕರಬಸಯ್ಯ ಶಾಸಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9ಕ್ಕೆ 501 ದಂಪತಿಯಿಂದ ಸಹಸ್ರ ಲಿಂಗಾರ್ಚನೆ, 10ಕ್ಕೆ ಗಿರಿಜಾ ಕಲ್ಯಾಣ, 11ಕ್ಕೆ ತಾಳಿಕೋಟಿ ಖಾಲ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರ ಆಶೀರ್ವಚನ ನಂತರ ಮಹಾಪ್ರಸಾದ ವಿತರಣೆ, ರಾತ್ರಿ 7ಕ್ಕೆ ಗಂಗಾರತಿ, 8ಕ್ಕೆ ಸೇಡಂ ಶ್ರೀ ಶಿವಶಂಕರ ಶಿವಾಚಾರ್ಯ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ, ಮಾಲಗತ್ತಿ ಶ್ರೀ ಡಾ.ಚನ್ನಬಸವ ಶರಣರ ತುಲಾಭಾರ, 8.30ಕ್ಕೆ 251 ಮುತೆದೆಯರಿಗೆ ಬಾಗಿನ ಅರ್ಪಿಸಲಾಗುತ್ತದೆ.
ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಸೊಂತ ಶ್ರೀ ಬಾಲತಪಸ್ವಿ ಅಭಿನವ ಶರಣ ಶಂಕರಲಿಂಗ ಮಹಾರಾಜ, ಹೊನ್ನಕಿರಣಗಿ ಶ್ರೀ ಚಂದ್ರಗುಂಡ ಶಿವಾಚಾರ್ಯ, ದಿಗ್ಗಾಂವ ಶ್ರೀ ಸಿದ್ದವಿರ ಶಿವಾಚಾರ್ಯ, ಹಲಕಟ್ಟಿ ಶ್ರೀ ಮುನೀಂದ್ರ ಶಿವಾಚಾರ್ಯ, ಪಾಳಾ ಶ್ರೀ ಗುರುಮೂರ್ತಿ ಶಿವಾಚಾರ್ಯ, ತೊಟ್ನಳ್ಳಿ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ರಾವೂರ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಲಕಟ್ಟಿ ಶ್ರೀ ರಾಜಶೇಖರ ಶಿವಾಚಾರ್ಯ, ಅಳ್ಳೊಳ್ಳಿ ಶ್ರೀ ಸಂಗಮನಾಥ ಶಿವಾಚಾರ್ಯ, ದಂಡೋತಿ ಶ್ರೀ ಬಾಲಯೋಗಿನಿ ಜಯಶ್ರೀ ಮಾತಾಜಿ, ದಿಗ್ಗಾಂವ ಶ್ರೀ ಮಲ್ಲಯ್ಯ ಮಹಾಸ್ವಾಮೀಜಿ ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯ ನಾಗರಾಜ ಸಿ.ಭಂಕಲಗಿ, ದೇವಸ್ಥಾನ ಜೀಣೋರ್ದ್ಧಾರ ಟ್ರಸ್ಟ್​ ಅಧ್ಯ ವಿಜಯಕುಮಾರ ದೇಶಮುಖ ಭಾಗವಹಿಸುವರು.
ಡಾ.ಶಿವಶರಣಯ್ಯ ಸ್ವಾಮಿ ಪುರದಯ್ಯನ ಮಠ, ಡಾ.ಕರಣಯ್ಯ ಶಾಸಿ ಸ್ಥಾವರಮಠ, ಡಾ.ಸೋಮನಾಥ ಶಾಸಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net