ಶ್ರೀ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿ- ಕಂದೇಗಾಲ ಗ್ರಾಮಗಳ ನಡುವೆ ಇರುವ ಇತಿಹಾಸ ಪ್ರಸಿದ್ದ ಶ್ರೀ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಸುಬ್ರಮಣ್ಯ ಷಷ್ಠಿ ರಥೋತ್ಸವ ಭಕ್ತಿ ಸಡಗರದಿಂದ ನಡೆಯಿತು.
ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿ- ಕಂದೇಗಾಲ ಗ್ರಾಮಗಳ ನಡುವೆ ಇರುವ ಇತಿಹಾಸ ಪ್ರಸಿದ್ದ ಶ್ರೀ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಸುಬ್ರಮಣ್ಯ ಷಷ್ಠಿ ರಥೋತ್ಸವ ಭಕ್ತಿ ಸಡಗರದಿಂದ ನಡೆಯಿತು.
Published on
ಮಳವಳ್ಳಿ: ತಾಲೂಕಿನ ಕಲ್ಲುವೀರನಹಳ್ಳಿ-ಕಂದೇಗಾಲ ಗ್ರಾಮಗಳ ನಡುವೆ ಇರುವ ಇತಿಹಾಸ ಪ್ರಸಿದ್ಧ ಶ್ರೀ ಮತ್ತಿತಾಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಸುಬ್ರಮಣ್ಯ ಷಷ್ಠಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಪೂರಕವಾಗಿ ನೆರವೇರಿತು.
ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಅರ್ಚಕ ವೃಂದ ದೇವರ ವಿಗ್ರಹಕ್ಕೆ ವಿವಿಧ ಅಭಿಷೇಕಗಳನ್ನು ನೆರವೇರಿಸುವುದರ ಜತೆಗೆ ಹೋಮ ಹವನ, ಸೇರಿದಂತೆ ಪೂಜಾ ಕೈಂಕ್ರರ್ಯಗಳನ್ನು ನಡೆಸಿದರು. ಬಳಿಕ ಸುಬ್ರಮಣ್ಯಸ್ವಾಮಿ ದೇವರ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಸಾವಿರಕ್ಕೂ ಅಧಿಕ ಭಕ್ತ ಸಮೂಹ ಆಗಮಿಸಿ ದೇವಸ್ಥಾನದ ಆವರಣದಲ್ಲಿರುವ ಹುತ್ತಗಳಿಗೆ ಪೂಜೆ ಸಲ್ಲಿಸಿ ಹಾಲು, ಬೆಣ್ಣೆ ತನಿ ಎರೆದು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು.
ಮಧ್ಯಾಹ್ನದ ಶುಭ ಮೂಹೂರ್ಥದಲ್ಲಿ ಸುಬ್ರಮಣ್ಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತಹಸೀಲ್ದಾರ್ ಲೋಕೇಶ್ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಹೊನ್ನನಾಯಕನಹಳ್ಳಿ ಬಸಪ್ಪ, ಮತ್ತಿತಾಳೇಶ್ವರ ದೇವಸ್ಥಾನದ ಬಸಪ್ಪ ಪೂಜಾ ಕುಣಿತ ಹಾಗೂ ತಮಟೆ ನಗಾರಿಯೊಂದಿಗೆ ನೂರಾರು ಭಕ್ತರು ಹರ್ಷೋದ್ಘಾರದೊಡನೆ ರಥಕ್ಕೆ ಕಟ್ಟಲಾಗಿದ್ದ ಹಗ್ಗವನ್ನು ಹಿಡಿದು ಎಳೆಯಲಾರಂಭಿಸಿದರು. ದೇವಸ್ಥಾನದ ಸುತ್ತಲೂ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗಿ ಬರುವ ಮೂಲಕ ರಥೋತ್ಸವ ಸಮಾಪ್ತಿಗೊಂಡಿತು. ಈ ವೇಳೆ ನೆರೆದಿದ್ದ ನವ ವಧು-ವರರು ಹಾಗೂ ಸಹಸ್ರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net