ಈ ಸಂದರ್ಭದಲ್ಲಿ ಮಾತನಾಡಿದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್, ಮುಂಗಾರು ಮತ್ತು ಹಿಂಗಾರು ಮಳೆಯನ್ನೇ ಅವಲಂಬಿಸಿಕೊಂಡು ಬಹುತೇಕ ರೈತರು ಕೃಷಿ ನಡೆಸುತ್ತಿದ್ದಾರೆ. ಪ್ರತಿವರ್ಷವೂ ದೇವರ ಕೃಪೆಯಿಂದ ಸಕಾಲದಲ್ಲಿ ಮಳೆ ಬರುತ್ತಿದ್ದು, ಉತ್ತಮ ಬೆಳೆ ಸಿಗುತ್ತಿದೆ. ಇದೇ ವಿಶ್ವಾಸದಿಂದ ಈ ವರ್ಷವೂ ಮಳೆಮಲ್ಲೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಗ್ರಾಮಗಳ ದೇವಾಲಯಗಳಲ್ಲಿ ಪೂಜೆ ನೆರವೇರಿಸಿ, ಬೆಟ್ಟ ಹತ್ತಿ ಸಮೂಹವಾಗಿ ಮಳೆಯಿಗಾಗಿ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದರು.