ನರಸಾಪುರ; ನರಸಾಪುರದ ದ್ವಿಪಥದಲ್ಲಿ ಡಾಂಬರೀಕರಣಕ್ಕೆ ಕಾನೂನುಬದ್ಧವಾಗಿ ನೋಟಿಸ್ ನೀಡಿ ಪರಿಹಾರ ನೀಡಿದರೆ ಮಾತ್ರ ನ್ಯಾಯಾಲಯದ ತಡೆಯಾೆ ತೆರವುಗೊಳಿಸಿ ಪ್ರಗತಿಗೆ ಅವಕಾಶ ನೀಡಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯೆ ಕುರ್ಕಿ ರಾಜೇಶ್ವರಿ ತಿಳಿಸಿದರು.account
ಗ್ರಾಮದ ತಮ್ಮ ಜಾಗಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಡಾಂಬರೀಕರಣಕ್ಕೆ ತಡೆಯಾೆ ತಂದಿರುವ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಆಸ್ತಿಗೆ ಸಂಬಂಧಿಸಿದ ಜಾಗದಲ್ಲಿದ್ದ ಖಾತೆ ರದ್ದು ಮಾಡಿ ಬಲವಂತವಾಗಿ ಜಾಗ ತೆಗೆದುಕೊಳ್ಳಲು ಮುಂದಾಗಿದ್ದರು. ಇದು ಮನಸ್ಸಿಗೆ ನೋವುಂಟು ಮಾಡಿದೆ. ನಾವೇ ಒತ್ತುವರಿ ಮಾಡಿಕೊಂಡಿದ್ದೇವೆ ಎಂದರ್ಥದಲ್ಲಿ ಬಿಂಬಿಸಲಾಗಿದೆ. ಹೀಗಾಗಿ ಆಸ್ತಿಗೆ ಸಂಬಂಧಿಸಿದಂತೆ ಮಾತ್ರ ತಡೆಯಾೆ ತಂದಿದ್ದೇನೆ. ಕೆಲವರು ಎಸಗಿದ ತಪ್ಪಿನಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಅದಕ್ಕಾಗಿಯೇ ಐದಾರು ತಿಂಗಳಿಂದ ರಸ್ತೆ ಕಾರ್ಯ ಸ್ಥಗಿತಗೊಂಡಿತ್ತು ಎಂದರು.
ನಮ್ಮಿಂದಲೇ ಕೆಲಸ ಸ್ಥಗಿತಗೊಂಡಿದೆ ಎಂದು ಭಾವಿಸಿ ಡಾಂಬರೀಕರಣಕ್ಕಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೆಗೆ ಹೋಗಿದ್ದರು. ನಾನು ಯಾವತ್ತೂ ರಸ್ತೆ ನಿರ್ಮಾಣಕ್ಕೆ ವಿರೋಧ ಮಾಡಿಲ್ಲ. ನಮ್ಮ ಒಪ್ಪಿಗೆ ಇಲ್ಲದೇ ಖಾತೆ ರದ್ದು ಮಾಡಿದ್ದಕ್ಕೆ ನ್ಯಾಯಾಲಯ ಮೊರೆ ಹೋಗಿದ್ದೇವೆ. ನನಗೂ ನಮ್ಮ ಜನರ ಹಿತ ಮುಖ್ಯ, ಅವರಿಗಾಗಿ ಜಾಗ ಬಿಟ್ಟು ಕೊಡಲು ಸಿದ್ಧ. ಆದರೆ, ಹಾಗೆಯೇ ಕೊಟ್ಟರೆ ನಮ್ಮದೇ ತಪ್ಪು ಎಂದು ಬಿಂಬಿತವಾಗುತ್ತದೆ. ಈ ಸಂಬಂಧ ಮತ್ತೆ ನಮ್ಮ ಹೆಸರಿಗೆ ಖಾತೆ ಮಾಡಬೇಕು. ಕಾನೂನಾತ್ಮಕವಾಗಿ ಸರ್ಕಾರದಿಂದ ಪರಿಹಾರ ನೀಡಬೇಕು. ಆಗ ಜಾಗ ಬಿಟ್ಟು ಕೊಡುತ್ತೇವೆ. ಈ ವಿಚಾರವನ್ನು ಈಗಾಗಲೇ ಎಇಇ ಜತೆ ಚರ್ಚಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಈಗ ನಿರ್ಮಾಣವಾಗುತ್ತಿರುವ ರಸ್ತೆಗೆ ಎರಡು ಬದಿ ಚರಂಡಿ ನಿರ್ಮಿಸಿಲ್ಲ. ಪಾದಚಾರಿ ಮಾರ್ಗ ಇಲ್ಲ. ಹೀಗಾಗಿ, ಈಗಲೂ ನ್ಯಾಯಾಲಯಕ್ಕೆ ಹೋಗಿ ರಸ್ತೆ ಕಾಮಗಾರಿ ನಿಲ್ಲಿಸಬಹುದು. ಆದರೆ ನಾನು ಆ ರೀತಿ ಮಾಡಲ್ಲ. ಕೆಲವರು ಅಧಿಕಾರವಿದೆ ಎಂದು ದರ್ಪ ತೋರಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಜಾಗ ಬಿಟ್ಟುಕೊಡಲು ಆಗುವುದಿಲ್ಲ. ಅದು ಕಾನೂನು ಪ್ರಕ್ರಿಯೆ ಮೂಲಕವೇ ಆಗಬೇಕಿದೆ ಎಂದರು.
ಗ್ರಾಪಂ ಸದಸ್ಯ ಕೆಇಬಿ ಚಂದ್ರು ಮಾತನಾಡಿ, ಹೋರಾಟದ ಪ್ರತಿಫಲವಾಗಿ, ನರಸಾಪುರ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದೆ. ಧೂಳಿನಿಂದ ಮುಕ್ತಿ ಸುಗುತ್ತಿದೆ. ತಕರಾರು ಇರುವ ರಸ್ತೆ ವಿಚಾರವಾಗಿ ರಾಜೇಶ್ವರಿ ಅವರ ಬಳಿ ಮಾತನಾಡಿ ಸಹಕರಿಸುವಂತೆ ಕೋರಲಾಗಿದೆ ಎಂದರು.
ನರಸಾಪುರ ಮುಖಂಡರಾದ ಎನ್.ಕೆ.ನಾಗರಾಜ್, ಬಿ.ಶ್ರೀನಿವಾಸ್, ಗೋಪಿ, ಕೃಷ್ಣಪ್ಪ, ರಾಜೇಂದ್ರ, ಶೇಖರ್, ಟಿ ಬಾಬು, ಸತೀಶ್, ಛಲವಾದಿ ವೆಂಕಟಸ್ವಾಮಿ, ಚಿನ್ನಯ್ಯ, ಕುರ್ಕಿ ಶ್ರೀಕಾಂತ್, ಟಿಪ್ಪು ಇದ್ದರು.