ಬೆಂಗಳೂರಿನಿಂದ ಮೈಸೂರುವರೆಗೆ ಸೋಮಣ್ಣ, ಕುಮಾರಸ್ವಾಮಿ ರೈಲ್ವೇ ವಿಂಡೋ ಟ್ರೇಲಿಂಗ್

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಬೆಂಗಳೂರಿನಿಂದ ಮೈಸೂರುವರೆಗೆ ವಿಶೇಷ ರೈಲಿನಲ್ಲಿ ವಿಂಡೋ ಟ್ರೈಲಿಂಗ್ ಪರಿಶೀಲನೆ ನಡೆಸಿದರು.
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಬೆಂಗಳೂರಿನಿಂದ ಮೈಸೂರುವರೆಗೆ ವಿಶೇಷ ರೈಲಿನಲ್ಲಿ ವಿಂಡೋ ಟ್ರೈಲಿಂಗ್ ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಿಂದ ಮೈಸೂರುವರೆಗೆ ರೈಲ್ವೇ ವಿಂಡೋ ಟ್ರೈಲಿಂಗ್
  • ಕೇಂದ್ರ ಸಚಿವರಾದ ಸೋಮಣ್ಣ, ಕುಮಾರಸ್ವಾಮಿ ಜಂಟಿ ಪ್ರಯಾಣ
  • ರೈಲು ನಿಲ್ದಾಣಗಳ ಪರಿಶೀಲನೆ, ಪ್ರಯಾಣಿಕ ಕುಂದು ಕೊರತೆ ಆಲಿಕೆ

ಬೆಂಗಳೂರು:ರಾಜ್ಯದರೈಲ್ವೇ ಯೋಜನೆಗಳ ಕಾಮಗಾರಿಗೆವೇಗ ನೀಡುವ ಸಲುವಾಗಿ ಕೇಂದ್ರರೈಲ್ವೇ ಖಾತೆ ರಾಜ್ಯ ಸಚಿವವಿ.ಸೋಮಣ್ಣಮತ್ತು ಕೇಂದ್ರ ಬೃಹತ್ ಕೈಗಾರಿಕಾಸಚಿವ ಕುಮಾರಸ್ವಾಮಿ ಬೆಂಗಳೂರಿನಿಂದಮೈಸೂರುವರೆಗೆ ವಿಶೇಷ ರೈಲಿನಲ್ಲಿವಿಂಡೋ ಟ್ರೈಲಿಂಗ್ ಪರಿಶೀಲನೆನಡೆಸಿದರು.ಈವೇಳೆ ಪ್ರತಿ ರೈಲ್ವೇ ನಿಲ್ದಾಣದಲ್ಲೂಪ್ರಯಾಣಿಕರ ಕುಂದುಕೊರತೆ ಆಲಿಸಿದಸಚಿವರು,ಸಾರ್ವಜನಿಕರಮನವಿಗೆ ಸ್ಪಂದಿಸಿ ಅಧಿಕಾರಿಗಳಿಗೆಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು.

ಬೆಂಗಳೂರಿನಕ್ರಾಂತಿವೀರ ಸಂಗೊಳ್ಳಿ ರಾಯಣ್ಣರೈಲು ನಿಲ್ದಾಣದಿಂದ ಹೊರಟ ವಿಶೇಷರೈಲು ಶೆಟ್ಟಿಹಳ್ಳಿ,ಮದ್ದೂರು,ಹನಕೆರೆ,ಮಂಡ್ಯ,ಪಾಂಡವಪುರ,ಶ್ರೀರಂಗಪಟ್ಟಣಮತ್ತು ಮೈಸೂರು ನಿಲ್ದಾಣಗಳಲ್ಲಿಪರಿಶೀಲನೆ ನಡೆಸಿದರು.

ನಿಡಘಟ್ಟಸಮೀಪದಲ್ಲಿ ಗ್ರಾಮಸ್ಥರು,ರೈತರುಸಚಿವರು ವಿಶೇಷ ರೈಲಿನ ಮೂಲಕಬರುತ್ತಿರುವ ವಿಷಯ ತಿಳಿದು ಅಪಾರಸಂಖ್ಯೆಯಲ್ಲಿ ಜಮಾಯಿಸಿದ್ದರು.ಇದನ್ನುಕಂಡು ಸಚಿವರು ರೈಲನ್ನು ನಿಲ್ಲಿಸಿ,್ಲಾಟ್‌ಾರಂಇಲ್ಲದಿದ್ದರೂ ಹಳಿಗಳ ಮೇಲೆ ಇಳಿದುಸ್ಥಳೀಯರ ಆಗ್ರಹವನ್ನು ಆಲಿಸಿದರು. ಸಚಿವರೊಂದಿಗೆಮೈಸೂರು ಸಂಸದ ಯದುವೀರ ಕೃಷ್ಣದತ್ತಒಡೆಯರ್,ಮಾಜಿಸಂಸದ ಪುಟ್ಟರಾಜು,ಮಾಜಿಸಚಿವ ಡಿ.ಸಿ.ತಮ್ಮಣ್ಣಮತ್ತು ಸಾರಾ ಮಹೇಶ್ ಹಾಗೂ ರೈಲ್ವೇಇಲಾಖೆಯ ಹಿರಿಯ ಅಧಿಕಾರಿಗಳುಉಪಸ್ಥಿತರಿದ್ದರು.

ಕಾಮಗಾರಿಗೆವೇಗ,ಸಮಸ್ಯೆಗೆಪರಿಹಾರದ ಭರವಸೆ

ಮದ್ದೂರಿನರೈಲ್ವೇ ನಿಲ್ದಾಣದ ಆಧುನೀಕರಣಮತ್ತು ಸಮಗ್ರ ಅಭಿವೃದ್ಧಿಗೆಅನುಮೋದನೆ ನೀಡಲಾಗಿದ್ದು,ಕಾಮಗಾರಿಕೂಡಾ ಆರಂಭವಾಗಿದೆ.ಕಾಮಗಾರಿಗೆವೇಗವನ್ನು ನೀಡಿ ಇನ್ನೊಂದುವರ್ಷದಲ್ಲಿ ಕಾಮಗಾರಿಯನ್ನುಪೂರ್ಣಗೊಳಿಸಿ ಮತ್ತೆಕುಮಾರಸ್ವಾಮಿಯವರೊಂದಿಗೆ ಬಂದುಉದ್ಘಾಟನೆ ಮಾಡುವುದಾಗಿ ಸಚಿವಸೋಮಣ್ಣ ೋಷಿಸಿದರು.ಇದೇವೇಳೆ ಮದ್ದೂರು ಸಿಟಿ ಸಮೀಪದಲ್ಲಿಇನ್ನೊಂದು ರೈಲ್ವೇ ಸ್ಟೇಷನ್ನಿರ್ಮಾಣದ ಬಗ್ಗೆ ಮನವಿ ಬಂದಿದ್ದು,ಈಬಗ್ಗೆ ಅಧಿಕಾರಿಗಳಿಗೆ ಅಗತ್ಯಸರ್ಕಾರಿ ಭೂಮಿ ಲಭ್ಯತೆ ಬಗ್ಗೆಪರಿಶೀಲಿಸಿ ವರದಿ ಸಲ್ಲಿಸುವಂತೆಸೂಚಿಸಿದರು.

ಹನಕೆರೆರೈಲ್ವೇ ನಿಲ್ದಾಣದ ಬಳಿ ಬೆಳಗ್ಗೆ7ಗಂಟೆಯಿಂದ11ಗಂಟೆಯವರೆಗೆರೈಲ್ವೇ ಲೆವೆಲ್ ಕ್ರಾಸಿಂಗ್ನಲ್ಲಿ ಗೇಟ್ ಹಾಕುವುದರಿಂದಕೆಲಸಕ್ಕೆ ಹೋಗುವವರಿಗೆ ಅನಾನುಕೂಲವಾಗುತ್ತಿದೆ.ಇದಕ್ಕೆಸೂಕ್ತ ಪರಿಹಾರ ನೀಡುವಂತೆ ಜನಒತ್ತಾಯಿಸಿದರು.ಸಮಸ್ಯೆಗಳನ್ನುಅಧ್ಯಯನ ಮಾಡಲು ಕೂಡಲೇ ಅಧಿಕಾರಿಗಳತಂಡವನ್ನು ಕಳುಹಿಸಿಕೊಡುತ್ತೇವೆ.ಅಧಿಕಾರಿಗಳೊಂದಿಗೆಸೌಜನ್ಯದಿಂದ ವರ್ತಿಸಿ ಹೆಚ್ಚಿನಕೆಲಸ ಮಾಡಿಸಿಕೊಳ್ಳುವಂತೆಕಿವಿಮಾತು ಸಚಿವರು ಹೇಳಿದರು.

ವಿಂಡೋ ಟ್ರೇಲಿಂಗ್ ಎಂದರೇನು ?

ರೈಲು ಸಂಚರಿಸುತ್ತಿರುವ  ಸಮಯದಲ್ಲಿ  ಸಚಿವರು, ಅಧಿಕಾರಿಗಳು ಅಥವಾ ಪರಿಶೀಲಕರು ರೈಲಿನ ಕೊನೆಯ ಬೋಗಿಯಲ್ಲಿ ಕುಳಿತು ವಿಸ್ತಾರವಾದ ಕಿಟಕಿಯಿಂದ ಹೊರಗೆ ನೋಡುತ್ತಾ ಟ್ರ್ಯಾಕ್,  ಸಿಗ್ನಲ್, ಸೇತುವೆ, ಓವರ್‌ಹೆಡ್ ಲೈನ್ ಮುಂತಾದವುಗಳನ್ನು ಪರಿಶೀಲಿಸುವ ವಿಧಾನ. ಸರಳವಾಗಿ ಹೇಳುವುದಾದರೆ ರೈಲಿನ ಹಿಂಭಾಗದಿಂದ ಮಾರ್ಗದ ಸ್ಥಿತಿಯನ್ನು ಪರಿಶೀಲಿಸುವುದೇ ವಿಂಡೋ ಟ್ರೇಲಿಂಗ್.

ಪ್ರಮುಖಯೋಜನೆಗಳು ಮತ್ತು ಅನುದಾನ

ವಿಂಡೋಟ್ರಯಲಿಂಗ್ ನಂತರ ಸಚಿವ ವಿ.ಸೋಮಣ್ಣಮೈಸೂರಿನಲ್ಲಿ ಸುದ್ದಿಗೋಷ್ಠಿನಡೆಸಿ ರಾಜ್ಯದಲ್ಲಿ ಇಲಾಖೆಯಪ್ರಮುಖ ಯೋಜನೆ ಕುರಿತು ಮಾಹಿತಿನೀಡಿದರು.

*2026-27ನೇಸಾಲಿನಲ್ಲಿ ಕರ್ನಾಟಕಕ್ಕೆ ₹7,748ಕೋಟಿಹಂಚಿಕೆ

*ರಾಜ್ಯದಲ್ಲಿ₹52,950ಕೋಟಿಮೌಲ್ಯದ ಕಾಮಗಾರಿಗಳು ಪ್ರಗತಿಯಲ್ಲಿವೆ

*ಅಮೃತಭಾರತ ಸ್ಟೇಷನ್ (ಎಬಿಎಸ್)ಯೋಜನೆಯಡಿ61ನಿಲ್ದಾಣಗಳಅಭಿವೃದ್ಧಿ

*ಕೆಎಸ್‌ಆರ್ಬೆಂಗಳೂರು,ಯಶವಂತಪುರ,ಬೆಂಗಳೂರುಕಂಟೋನ್ಮೆಂಟ್ ನಿಲ್ದಾಣಗಳ ಪುನರ್ಅಭಿವೃದ್ಧಿ

*ಸಕಲೇಶಪುರಸುಬ್ರಹ್ಮಣ್ಯ ಘಾಟ್ (55ಕಿಮೀ)ವಿದ್ಯುದೀಕರಣಪೂರ್ಣ

*ದಕ್ಷಿಣಪಶ್ಚಿಮ ರೈಲ್ವೆಯಲ್ಲಿ 97%ಮಾರ್ಗವಿದ್ಯುದೀಕರಣ

*31 ಹೊಸರೈಲು ಮಾರ್ಗ ಯೋಜನೆಗಳು (3,840ಕಿಮೀ)

*2014ರಿಂದ1,750ಕಿಮೀಹೊಸ ಹಳಿ ನಿರ್ಮಾಣ

*707 ಫ್ಲೈಓವರ್ಹಾಗೂ ಅಂಡರ್‌ಪಾಸ್ ನಿರ್ಮಾಣ 

120 ವರ್ಷಗಳ ಇತಿಹಾಸವಿರುವ ರೈಲ್ವೇ ಇಲಾಖೆಯ ಕಾಮಗಾರಿಗೆ ವೇಗ ಕಲ್ಪಿಸಬೇಕೆಂಬ ಕಾರಣಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಜನರ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಅರ್ಥ ಮಾಡಿಕೊಳ್ಳಲು ಸಚಿವರೇ ಬಂದು ಖುದ್ದು ಪ್ರಯಾಣಿಕರ ಕುಂದು-ಕೊರತೆಗಳನ್ನು ಆಲಿಸಿದ್ದೇವೆ. ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರು ೋಷಿಸಿರುವ ರಾಜ್ಯದ ರೈಲ್ವೇ ಕಾಮಗಾರಿಗಳಿಗೆ ವೇಗ ನೀಡಲು ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಸೂಚನೆಗಳನ್ನು ನೀಡುತ್ತಿದ್ದೇವೆ.

ಮಂಡ್ಯ ಭಾಗದ ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರವನ್ನು ಒದಗಿಸಬೇಕೆಂಬ ಉದ್ದೇಶದಿಂದ ರೈಲ್ವೇ ಸಚಿವರ ನೇತೃತ್ವದಲ್ಲಿ ಈ ವಿಶೇಷ ಭೇಟಿ ನೀಡಿದ್ದೇವೆ. ಕೋವಿಡ್ ಅವಧಿಯಲ್ಲಿ ರದ್ದುಪಡಿಸಿದ್ದ ರೈಲು ನಿಲುಗಡೆಯನ್ನು ಹಂತ ಹಂತವಾಗಿ ಪುನಃ ಆರಂಭಿಸಲಾಗುವುದು.

ಸ್ವತಃ ಕೇಂದ್ರದ ಇಬ್ಬರು ಮಂತ್ರಿಗಳೇ ಆಗಮಿಸಿರುವುದರಿಂದ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ದೊರೆಯುತ್ತಿದೆ. 60 ವರ್ಷದಲ್ಲಿ ಆಗದ ಕಾಮಗಾರಿಗಳು ಕಳೆದ 10 ವರ್ಷದಲ್ಲಿ ಆಗಿವೆ. ಬಹುಬೇಡಿಕೆಯ ವಂದೇ ಭಾರತ್ ರೈಲು, ಸರ್ವೀಸ್ ಸ್ಟೇಷನ್ ಅಭಿವೃದ್ಧಿ, ಸೇತುವೆ ಹೀಗೆ ಮೈಸೂರು ಭಾಗದ ಹಲವು ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net