ಗಣೇಶ ಚತುರ್ಥಿಯಂದೆ ಯೋಧ ಆತ್ಮಹತ್ಯೆ

ಹೊಟ್ಟೆ ನೋವು ತಾಳಲಾರದೆ ಯೋಧ ಆತ್ಮಹತ್ಯೆ
ಹೊಟ್ಟೆ ನೋವು ತಾಳಲಾರದೆ ಯೋಧ ಆತ್ಮಹತ್ಯೆ
Published on

ಪ್ರಮುಖ ಮುಖ್ಯಾಂಶಗಳು

  • ಗಣೇಶ ಚತುರ್ಥಿಯೆಂದೆ ಯೋಧ ಆತ್ಮಹತ್ಯೆ
  • ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಯೋಧ
  • ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ
ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ
ಸಂಕೇಶ್ವರ: ಗಣೇಶ ಚತುರ್ಥಿಗೆ ರಜೆ ಮೇಲೆ ಬಂದಿದ್ದ ಯೋಧ ಹುಕ್ಕೇರಿ ತಾಲ್ಲೂಕಿನ ಸೊಲ್ಲಾಪುರ ಗ್ರಾಮದ ನಿವಾಸಿ ಅಣ್ಣಾಸಾಹೇಬ ಮೋಹಿತೆ(೩೩) ಹೊಟ್ಟೆನೋವು ತಾಳಲಾರದೆ ಹರಗಾಪುರ ಗ್ರಾಮದ ಗುಡ್ಡದಲ್ಲಿ ಚತುರ್ಥಿಯದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಾಸಾಹೇಬ ರಜೆ ಮೇಲೆ ಕಳೆದ ಮೂರು ದಿನದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ. ನಿರಂತರ ಹೊಟ್ಟೆ ನೋವು ಕಾಣಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ ಎಂಸು ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net