ಉಪಪಂಗಡಗಳು ಒಗ್ಗೂಡಿದರೆ ಸಮಾಜ ಸದೃಢವಾಗಲಿದೆ; ಶ್ರೀರಂಭಾಪುರಿ ಜಗದ್ಗುರುಗಳ ಕರೆ

ಕನ್ನಲ್ಲಿಯಲ್ಲಿ ಹ್ಮಮಿಕೊಂಡಿದ್ದ ಧನುರ್ಮಾಸದ ಇಷ್ಟಲಿಂಗ ಮಹಾ ಪೂಜೆ ಹಾಗೂ ಧರ್ಮೋಪದೇಶ ಸಮಾರಂಭದಲ್ಲಿ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು. ವಿವಿಧ ಮಠಾಧೀಶರು, ಎಸ್.ಶಾಂತರಾಜು, ಎಂ.ರುದ್ರೇಶ್, ಶಾಸಕ ಎಸ್.ಟಿ.ಸೋಮಶೇಖರ ಇದ್ದರು.
ಕನ್ನಲ್ಲಿಯಲ್ಲಿ ಹ್ಮಮಿಕೊಂಡಿದ್ದ ಧನುರ್ಮಾಸದ ಇಷ್ಟಲಿಂಗ ಮಹಾ ಪೂಜೆ ಹಾಗೂ ಧರ್ಮೋಪದೇಶ ಸಮಾರಂಭದಲ್ಲಿ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು. ವಿವಿಧ ಮಠಾಧೀಶರು, ಎಸ್.ಶಾಂತರಾಜು, ಎಂ.ರುದ್ರೇಶ್, ಶಾಸಕ ಎಸ್.ಟಿ.ಸೋಮಶೇಖರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪಪಂಗಡಗಳು ಒಗ್ಗೂಡಿದರೆ ಸಮಾಜ ಸದೃಢ
  • ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಕರೆ
  • ಕನ್ನಲ್ಲಿಯಲ್ಲಿ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ

ಬೆಂಗಳೂರು: ಜಗತ್ತಿನಲ್ಲಿವೀರಶೈವ, ಲಿಂಗಾಯಿತಧರ್ಮ ಸರ್ವಸಮಾಜಕ್ಕೆ ದಾರಿದೀಪವಾಗಿದ್ದು,ಎಲ್ಲ ಉಪ ಪಂಗಡಗಳನ್ನುಒಗ್ಗೂಡಿದರೆ ಈ ಸಮಾಜ ಮತ್ತಷ್ಟುಸದೃಢವಾಗಲಿದೆ ಎಂದು ಬಾಳೆಹೊನ್ನೂರುರಂಭಾಪುರಿ ಡಾ.ವೀರಸೋಮೇಶ್ವರಜಗದ್ಗುರುಗಳು ಕರೆನೀಡಿದರು.

ಕನ್ನಲ್ಲಿಯಲ್ಲಿನಡೆದ ಧನುರ್ಮಾಸದ ಇಷ್ಟಲಿಂಗಮಹಾಪೂಜೆ ಹಾಗೂ ಧರ್ಮೋಪದೇಶಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿಆಶೀರ್ವಚನ ನೀಡಿದ ಅವರು,ಜಗದ್ಗುರುರೇಣುಕಾಚಾರ್ಯರು ಭೋದಿಸಿದತತ್ವಗಳನ್ನು ಜೀವನದಲ್ಲಿಅಳವಡಿಸಿಕೊಂಡು ಜೀವನವಿಕಾಸ,ಜ್ಞಾನ,ಮಾನವೀಯತೆಬೆಳೆಸಿಕೊಳ್ಳಬೇಕು.ಲಿಂಗಾಯತ-ವೀರಶೈವರುಉಪ ಪಂಗಡಗಳನ್ನು ಒಗ್ಗೂಡಿಸಿಬಸವಾದಿ ಶರಣರ ನೀಡಿದ ಸಂದೇಶವನ್ನುವಿಶ್ವಕ್ಕೆ ತಿಳಿಸಬೇಕು.ವೀರಶೈವ ಧರ್ಮದಲ್ಲಿಅಹಿಂಸೆ, ಶಾಂತಿ,ಸತ್ಯ,ದಯೆ,ಕ್ಷಮೆ,ಸಹಬಾಳ್ವೆ,ಹೀಗೆ ಎಲ್ಲತತ್ವಗಳು ಇವೆ.ಇಂತಹ ಮಹೋನ್ನತಸಮುದಾಯದಲ್ಲಿ ಹುಟ್ಟಿದ ಪ್ರತಿಯೊಬ್ಬರೂಲಿಂಗಧಾರಣೆ ಮಾಡಿಕೊಂಡು ನಿತ್ಯಶಿವಪೂಜೆ, ಹಣೆಗೆವಿಭೂತಿ ಧಾರಣೆ ಮಾಡಬೇಕು ಎಂದರು.

ರಾಷ್ಟ್ರದಲ್ಲಿಅಶಾಂತಿ, ಅರಾಜಕತೆ,ದ್ವೇಷ,ಅಸೂಯೆ,ಕೋಮುದ್ವೇಷಹೆಚ್ಚಾಗುತ್ತಿದ್ದು,ನಾವು ಶಾಂತಿ,ಸಹಬಾಳ್ವೆಯಸಂದೇಶಗಳನ್ನು ಸಾರುವ ಮೂಲಕ ಧರ್ಮ,ಸಂಸ್ಕೃತಿ,ಸಮಾಜವನ್ನುಉಳಿಸುವ ಕೆಲಸ ಮಾಡಬೇಕು ಎಂದುಜಗದ್ಗುರುಗಳು ಕರೆ ನೀಡಿದರು.

ಸಮಾರಂಭದಲ್ಲಿಎಡೆಯೂರು,ಸಿದ್ಧರಬೆಟ್ಟ,ಚಿಕ್ಕಕಲ್ಲುಬಾಳು,ಕನ್ನಲ್ಲಿ ಮಠದಶ್ರೀಗಳು, ನಾಟಕಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ,ಶಾಸಕ ಎಸ್.ಟಿಸೋಮಶೇಖರ, ರಾಜ್ಯಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷಎಂ.ರುದ್ರೇಶ್,ಕನ್ನಲ್ಲಿವೀರಭದ್ರ ದೇವಾಲಯದ ನಿತ್ಯಾನ್ನದಾಸೋಹ ಸಮಿತಿ ಅಧ್ಯಕ್ಷ ಎಸ್.ಶಾಂತರಾಜು,ಕಾರ್ಯದರ್ಶಿಜಿ.ಸಿದ್ದಲಿಂಗಸ್ವಾಮಿ,ಸಾಮಾಜಿಕ ಕಾರ್ಯಕರ್ತಸೂಲಿಕೆರೆ ಎಸ್.ಆರ್.ಮೋಹನಕುಮಾರ್,ಕೊಡಿಗೆಹಳ್ಳಿಎನ್.ನಂಜುಂಡೇಶ್,ಬಾಳೆಎಲೆ ಬಸವರಾಜು,ಮಂಜುನಾಥ್ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net