ಎನ್​ಎಸ್​ಎಸ್​ನಿಂದ ಸಾಮಾಜಿಕ ಜಾಗೃತಿ

ಸಾವಳಗಿ (ಬಿ) ಗ್ರಾಮದಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಿಂದ ಏರ್ಪಡಿಸಿದ್ದ ಎನ್​ಎಸ್​ಎಸ್​ ಶಿಬಿರದಲ್ಲಿ ದೀಪಗಳಲ್ಲಿ ಭಾರತದ ನಕಾಶೆ ಬಿಡಿಸಿ, ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಸಾವಳಗಿ (ಬಿ) ಗ್ರಾಮದಲ್ಲಿ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಿಂದ ಏರ್ಪಡಿಸಿದ್ದ ಎನ್​ಎಸ್​ಎಸ್​ ಶಿಬಿರದಲ್ಲಿ ದೀಪಗಳಲ್ಲಿ ಭಾರತದ ನಕಾಶೆ ಬಿಡಿಸಿ, ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
Published on
ಕಲಬುರಗಿ: ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಿಂದ ಸಾವಳಗಿ (ಬಿ) ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು ಏರ್ಪಡಿಸಿ ಸಾಮಾಜಿಕ ಜಾಗೃತಿ ಮೂಡಿಸಲಾಯಿತು.
ಸಾಮಾಜಿಕ ಪಿಡುಗುಗಳಾದ ಪ್ಲಾಸ್ಟಿಕ್​ ನಿಮೂರ್ಲನೆ, ಪೋಷಣ್​ ಅಭಿಯಾನ, ಮಾದಕ ದ್ರವ್ಯ ಸೇವನೆ, ಸ್ತ್ರೀ ಶಿಕ್ಷಣ, ಸುರೆ, ಮಹಿಳಾ ಸಬಲೀಕರಣ, ಸ್ವಚ್ಛ ಭಾರತ ಕನಸಿನ ಭಾರತ, ಪರಿಸರ ಸಂರಕ್ಷಣೆ ಸೇರಿ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಗ್ರಾಮದ ಮನೆ ಮನೆಗಳಿಎನ್​ಎಸ್​ಎಸ್​ ಸ್ವಯಂ ಸೇವಕರು ತೆರಳಿ ಜಾಗೃತಿ ಮೂಡಿಸಿ, ಜನರಿಗೆ ಸಾಮಾಜಿಕ ವಿಷಯಗಳ ಕುರಿತು ಮನದಟ್ಟು ಮಾಡಿದರು. ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಗುರುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ಸಮಾರೋಪ ಸಮಾರಂಭದಲ್ಲಿ ಶರಣಬಸಪ್ಪ ಹೀರಾ ಮಾತನಾಡಿ, ಸಮಾಜ ಸೇವೆ ಒದಗಿಸಲು ಸದೃಢವಾಗಿ ಸಜ್ಜಗೊಳ್ಳಬೇಕು ಎಂದರು. ಡಾ.ಓಂ ಪ್ರಕಾಶ ಸೋನಾರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ್​ ಬಟಗೇರಿ, ಎಸ್​.ಜಿ.ಹಿರೇಮಠ, ಡಾ.ಲತಾದೇವಿ ಕರೆಕಲ್​, ಡಾ.ರಮೇಶ ಕೆ.ಬಿ, ಡಾ.ಆನಂದ ಗುತ್ತೇದಾರ, ಡಾ.ಬಸವರಾಜ ನರಿಬೋಳಿ, ಪವನ ಮೋಹನರಾವ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net